ದೆಹಲಿ: ಮತ್ತೊಬ್ಬ ಜೆಎನ್‏ಯು ವಿದ್ಯಾರ್ಥಿ ಮುಕುಲ್ ಜೈನ್ ನಾಪತ್ತೆ

ನಜೀಬ್ ಅಹ್ಮದ್ ನಾಪತ್ತೆಯಾಗಿ ವರ್ಷಗಳೇ ಕಳೆದರೂ ಈ ವರೆಗೂ ವಿದ್ಯಾರ್ಥಿ ಕುರಿತಂತೆ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ. ಈ ನಡುವೆಯೇ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿರುವ...
ನಾಪತ್ತೆಯಾಗಿರುವ ತಮ್ಮ ಪುತ್ರನನ್ನು ನೆನೆದು ರೋಧಿಸುತ್ತಿರುವ ನಜೀಬ್ ತಾಯಿ (ಸಂಗ್ರಹ ಚಿತ್ರ)
ನಾಪತ್ತೆಯಾಗಿರುವ ತಮ್ಮ ಪುತ್ರನನ್ನು ನೆನೆದು ರೋಧಿಸುತ್ತಿರುವ ನಜೀಬ್ ತಾಯಿ (ಸಂಗ್ರಹ ಚಿತ್ರ)
ನವದೆಹಲಿ: ನಜೀಬ್ ಅಹ್ಮದ್ ನಾಪತ್ತೆಯಾಗಿ ವರ್ಷಗಳೇ ಕಳೆದರೂ ಈ ವರೆಗೂ ವಿದ್ಯಾರ್ಥಿ ಕುರಿತಂತೆ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ. ಈ ನಡುವೆಯೇ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿರುವ ಪ್ರಕರಣವೊಂದು ಬೆಳಿಕಿಗೆ ಬಂದಿದೆ. 
ಘಾಜಿಯಾಬಾದ್ ನಿವಾಸಿಯಾಗಿರುವ ಜೆಎನ್'ಯು ವಿದ್ಯಾರ್ಥಿ ಮುಕುಲ್ ಜೈನ್ ನಾಪತ್ತೆಯಾಗಿರುವ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ. ಜ.8 ರಿಂದ ಮುಕುಲ್ ಅವರು ಕಣ್ಮರೆಯಾಗಿದ್ದಾರೆಂದು ತಿಳಿದುಬಂದಿದೆ. 
ಮುಕುಲ್ ಅವರು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಪ್ರಕರಣದಲ್ಲಿ ಈ ವರೆಗೂ ಯಾವುದೇ ಸಂಶಯಗಳು ಕಂಡುಬಂದಿಲ್ಲ ಎಂದು ನೈಋತ್ಯ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಬಯೋ ಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ಕಳೆದ 2016 ಅಕ್ಟೋಬರ್ 14ರಂದು ಜಗಳವಾಗಿತ್ತು, ಬಳಿಕ ಅ.15ರಂದು ಮಹಿ ಮಾಂಡೋವಿ ಹಾಸ್ಟೆಲ್ ನಿಂದ ನಜೀಬ್ ಕಾಣೆಯಾಗಿದ್ದ. ನಜೀಬ್ ನಾಪತ್ತೆಯಾಗಿ ಹಲವು ತಿಂಗಳುಗಳೇ ಕಳೆದರೂ ಈವರೆಗೂ ಆತನ ಕುರಿತಂತೆ ಯಾವುದೇ ರೀತಿಯ ಸುಳಿವುಗಳು ಪತ್ತೆಯಾಗಿಲ್ಲ. ದೆಹಲಿ ಪೊಲೀಸರು ಈಗಲೂ ವಿದ್ಯಾರ್ಥಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com