ಭಾರತದ ಇಂಟರ್ ನೆಟ್ ಗುರು ವಿಜಯ್ ಮುಖಿ ನಿಧನ

ಭಾರತ ಇಂಟರ್ ನೆಟ್ ಗುರು ಎಂದೇ ಖ್ಯಾತರಾಗಿದ್ದ ವಿಜಯ್ ಮುಖಿ ಅವರು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಇಂಟರ್ ನೆಟ್ ಗುರು ವಿಜಯ್ ಮುಖಿ
ಇಂಟರ್ ನೆಟ್ ಗುರು ವಿಜಯ್ ಮುಖಿ
Updated on: 
ಮುಂಬೈ: ಭಾರತ ಇಂಟರ್ ನೆಟ್ ಗುರು ಎಂದೇ ಖ್ಯಾತರಾಗಿದ್ದ ವಿಜಯ್ ಮುಖಿ ಅವರು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕಳೆದ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದ ವಿಜಯ್ ಮುಖಿ ಅವರು ಮನೆಯಲ್ಲೇ ನಿಧನರಾಗಿದ್ದು, ಅವರ ಅಂತಿಮ ವಿಧಿವಿಧಾನ ಇಂದು ಮುಂಬೈನ ದಾದರ್ ನಲ್ಲಿರುವ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ನೆರವೇರಲಿದೆ. ವೀರಮಾತ  ಜೀಜಾಬಾಯಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ  ವಿಜಯ್ ಮುಖಿ ಇಂಟರ್ ನೆಟ್ ಕ್ಷೇತ್ರದ ಆರಂಭಿಕ ದಿನಗಳಲ್ಲೇ ಮುಂಬೈನಲ್ಲಿ 1989ರಲ್ಲಿ ದೇಶದ ಪ್ರಪ್ರಥಮ ಕಂಪ್ಯೂಟರ್ ತರಬೇತಿ ಕೇಂದ್ರ  ಆರಂಭಿಸಿದ್ದರು. ಇದೇ ಕಾರಣಕ್ಕೆ ಇವರನ್ನು ಇಂಟರ್ ನೆಟ್ ಗುರು ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.
ವಿಜಯ್ ಮುಖಿ ಅವರು ಈ ವರೆಗೂ ಒಟ್ಟು 80 ಪುಸ್ತಕಗಳನ್ನು ಬರೆದಿದ್ದು, ದೇಶದ ಪ್ರಮುಖ ಕಂಪ್ಯೂಟರ್ ಭದ್ರತಾ ತಂತ್ರಾಂಶ ರಚನಾಕಾರರಲ್ಲಿ ಒಬ್ಬರಾಗಿದ್ದಾರೆ. ಮಾಹಿತಿ ಸುರಕ್ಷತೆ ಮತ್ತು ತಂತ್ರಜ್ಞಾನ ಸಂಸ್ಥೆಯ ಸಂಸ್ಥಾಪಕ  ಅಧ್ಯಕ್ಷರಾಗಿಯೂ ವಿಜಯ್ ಮುಖಿ ಅವರು ಸೇವೆ ಸಲ್ಲಿಸಿದ್ದರು. ಇನ್ನು ಮುಂಬೈ ಪೊಲೀಸ ಜೊತೆಗೂಡಿ ನಾಸ್ಕಮ್ ನೊಂದಿಗೆ ಸೈಬರ್ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತೆಯೇ ಭಾರತೀಯ ಇಂಟರ್ ನೆಟ್  ಬಳಕೆದಾರರ ಸಮುದಾಯ ಸಹ ಸಂಸ್ಥಾಪಕರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com