ತ್ರಿವಳಿ ತಲಾಖ್ ವಿವಾದ: ಸುಪ್ರೀಂ ಕೋರ್ಟ್'ಗೆ ಕಾನೂನು ರಚಿಸುವ ಹಕ್ಕುಇಲ್ಲ- ಎಐಎಂಪಿಎಲ್'ಬಿ

ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ಮೌಲ್ವಿ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್'ಬಿ), ಕಾನೂನು ರಚಿಸುವ ಹಕ್ಕು ಸುಪ್ರೀಂಕೋರ್ಟ್'ಗೆ ಇಲ್ಲ ಎಂದು ಮಂಗಳವಾರ ಹೇಳಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಔರಂಗಾಬಾದ್: ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ಮೌಲ್ವಿ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್'ಬಿ), ಕಾನೂನು ರಚಿಸುವ ಹಕ್ಕು ಸುಪ್ರೀಂಕೋರ್ಟ್'ಗೆ ಇಲ್ಲ ಎಂದು ಮಂಗಳವಾರ ಹೇಳಿದೆ. 
ತ್ರಿವಳಿ ತಲಾಖ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಐಎಂಪಿಎಲ್'ಬಿ ಸದಸ್ಯ ಮೌಲಾನಾ ಅಟಾ ಉರ್ ರೆಹ್ಮನ್ ರಶಿದಿ ಅವರು, ಕಾನೂನು ಚೌಕಟ್ಟಿನೊಳಗೆ ಆದೇಶಗಳನ್ನು ನೀಡುವುದು ಸುಪ್ರೀಂಕೋರ್ಟ್ ಕೆಲಸವೇ ಹೊರತು, ಕಾನೂನು ರಚನೆ ಮಾಡುವುದಲ್ಲ ಎಂದು ಹೇಳಿದ್ದಾರೆ. 
ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ನಮ್ಮ ಹಕ್ಕುಗಳಿಗೆ ವಿರುದ್ಧವಾಗಿದೆ. ಇದನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಶರಿಯಾ ಕಾನೂನುಗಳ ಮಧ್ಯೆ ಸುಪ್ರೀಂಕೋರ್ಟ್ ಹಾಗೂ ಸರ್ಕಾರ ತಲೆಹಾಕುವುದು ತಪ್ಪು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com