ನವದೆಹಲಿ: ಖಾಸಗಿತನದ ರಕ್ಷಣೆಗಾಗಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ನಿನ್ನೆಯಷ್ಟೇ 'ವರ್ಚ್ಯುಯಲ್ ಐಡಿ' ಎಂಬ ಹೊಸ ಪರಿಕಲ್ಪನೆಯನ್ನು ಪರಿಚಿಯಿಸಿದ್ದು, ಇದು 'ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಪಿ ಚದಂಬರಂ ಅವರು ವ್ಯಂಗ್ಯವಾಡಿದ್ದಾರೆ.