ತ್ರಿವಳಿ ತಲಾಖ್ ಮಸೂದೆ ಅರ್ಥಹೀನ: ಜಮಾತ್-ಇ-ಇಸ್ಲಾಮಿ ಹಿಂದ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತ್ರಿವಳಿ ತಲಾಖ್ ಮಸೂದೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಮಾತ್-ಇ-ಇಸ್ಲಾಮಿ ಹಿಂದ್ ಮಸೂದೆ ಜಾರಿ ಅರ್ಥಹೀನವಾಗಿದೆ ಎಂದು ಗುರುವಾರ ಹೇಳಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತ್ರಿವಳಿ ತಲಾಖ್ ಮಸೂದೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಮಾತ್-ಇ-ಇಸ್ಲಾಮಿ ಹಿಂದ್ ಮಸೂದೆ ಜಾರಿ ಅರ್ಥಹೀನವಾಗಿದೆ ಎಂದು ಗುರುವಾರ ಹೇಳಿದೆ. 
ತ್ರಿವಳಿ ತಲಾಖ್ ಮಸೂದೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಮಾತ್-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಮೌಲಾನಾ ಜಲಾಲುದ್ದೀನ್ ಉಮಾರಿಯವರು, ಏಕರೂಪ ನಾಗರೀಕ ನೀತಿ ಸಂಹಿತೆ ಕುರಿತಂತೆ ಸರ್ಕಾರ ನಿಜಕ್ಕೂ ಗಂಭೀರವಾಗಿರುವುದೇ ಆಗಿದ್ದರೆ, ಇಂತಹ ಮಸೂದೆಗಳನ್ನು ಜಾರಿಗೆ ತಂದು ಸಾರ್ವಜನಿಕರು ಬಹಿರಂಗವಾಗಿ ಚರ್ಚೆ ನಡೆಸುವಂತೆ, ಸಲಹೆಗಳನ್ನು ನೀಡುವಂತೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. 
ಅಲ್ಪಸಂಖ್ಯಾತರನ್ನು ಅವರು ಬೆದರಿಸಬಹುದು. ಆದರೆ, ವಾಸ್ತವವಾಗಿ ಜನಾಂಗೀಯ, ಬುಡಕಟ್ಟು, ಧರ್ಮ ಹಾಗೂ ನಂಬಿಕೆಯ ವ್ಯವಸ್ಥೆ ಮತ್ತು ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಗಷ್ಟೇ ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೆ ತರಬಹುದಾಗಿದೆ ಎಂದು ತಿಳಿಸಿದ್ದಾರೆ. 
ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿದೆ. ಕೆಲ ಮಹಿಳೆಯರು ಪತಿಯನ್ನು ಕೂಡಲೇ ದೂರಾಗಬೇಕೆಂದು ಬಯಸುತ್ತಾರೆ. ಒಂದು ದಿನ ಕೂಡ ಆತನ ಪತ್ನಿಯಾಗಿ ಮುಂದುವರೆಯಲು ಆಕೆ ಇಷ್ಟಪಡುವುದಿಲ್ಲ. ಕೂಡಲೇ ವಿವಾಹ ಬಂಧನದಿಂದ ಮುಕ್ತಳಾಗಬೇಕೆಂದು ಬಯಸುತ್ತಾಳೆ. ಇಂತಹ ಕಾನೂನುಗಳನ್ನು ಜಾರಿಗೆ ತರುವುದರಿಂದ ಅವರ ದುಃಖ ಮತ್ತಷ್ಟು ಹೆಚ್ಚಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 
ಪ್ರಾಮಾಣಿಕರನ್ನು ಗುರಿ ಮಾಡಲಾಗುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಲವರನ್ನು ವಿದೇಶಿಗರೆಂದು ಘೋಷಣೆ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ವಿದೇಶಿಗನೆಂದು ಘೋಷಣೆ ಮಾಡಿದ ಬಳಿಕ ಆತನಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗುತ್ತಿದೆ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com