ನಿತೀಶ್ ಕುಮಾರ್ ಕಾರಿನ ಮೇಲೆ ಕಲ್ಲು ತೂರಾಟ, ಬಿಹಾರ ಸಿಎಂ ಸೇಫ್

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು 'ವಿಕಾಸ ಸಮೀಕ್ಷಾ ಯಾತ್ರೆ' ಪ್ರಯುಕ್ತ ಗ್ರಾಮವೊಂದಕ್ಕೆ ತೆರಳುತ್ತಿದ್ದ ವೇಳೆ ಅವರ ಕಾರು ಹಾಗೂ ಬೆಂಗಾವಲು....
ನಿತೀಶ್ ಕುಮಾರ್
ನಿತೀಶ್ ಕುಮಾರ್
ಬಕ್ಸಾರ್: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು 'ವಿಕಾಸ ಸಮೀಕ್ಷಾ ಯಾತ್ರೆ' ಪ್ರಯುಕ್ತ ಗ್ರಾಮವೊಂದಕ್ಕೆ ತೆರಳುತ್ತಿದ್ದ ವೇಳೆ ಅವರ ಕಾರು ಹಾಗೂ ಬೆಂಗಾವಲು ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಸಿಎಂ ಸುರಕ್ಷಿತವಾಗಿದ್ದಾರೆ. 
ಘಟನೆಯಲ್ಲಿ ಮುಖ್ಯಮಂತ್ರಿಗಳಿಗೆ ಯಾವುದೇ ಗಾಯಳಾಗಿಲ್ಲ. ಆದರೆ ನಿತೀಶ್‌ ಅವರ ಬೆಂಗಾವಲಿಗಿದ್ದ ಇಬ್ಬರು ಭದ್ರತಾ ಸಿಬಂದಿಗಳು ಗಾಯಗೊಂಡಿದ್ದಾರೆ.
ನಿತೀಶ್‌ ಕುಮಾರ್ ಅವರು ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿಯನ್ನು ಅರಿಯಲು ಕಳೆದ ಡಿ.12ರಿಂದ ರಾಜ್ಯಾದ್ಯಂತ ವಿಕಾಸ ಸಮೀಕ್ಷಾ ಯಾತ್ರೆ ಕೈಗೊಂಡಿದ್ದು, ಇಂದು ದುಮ್ರೋನ್ ಬ್ಲಾಕ್ ನಲ್ಲಿ 272 ಕೋಟಿ ರುಪಾಯಿ ಮೌಲ್ಯದ 168 ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ತೆರಳಿದ್ದರು.
ವರದಿಗಳ ಪ್ರಕಾರ ನಂದನ ಗ್ರಾಮದವರು ಮುಖ್ಯಮಂತ್ರಿ ನಿತೀಶ್‌ ದಲಿತ ಕೇರಿಗೆ ಭೇಟಿ ನೀಡಬೇಕೆಂದು ಬಯಸಿದ್ದರು. ಆದರೆ ಆ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯ ಕಲ್ಲೆಸೆತದ ಘಟನೆಗೆ ಕಾರಣವಾಯಿತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com