ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವಿಟರ್ ಖಾತೆ ಹ್ಯಾಕ್ ಮಾಡಿದ 'ಪಾಕ್'

ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ಸೈಯ್ಯದ್ ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆಯನ್ನು ಪಾಕಿಸ್ತಾನಿ ಹ್ಯಾಕರ್ ಹ್ಯಾಕ್ ಮಾಡಿದ್ದ ಘಟನೆ ಭಾನುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ಸೈಯ್ಯದ್ ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆಯನ್ನು ಪಾಕಿಸ್ತಾನಿ ಹ್ಯಾಕರ್ ಹ್ಯಾಕ್ ಮಾಡಿದ್ದ ಘಟನೆ ಭಾನುವಾರ ನಡೆದಿದೆ.
ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಪಾಕಿಸ್ತಾನ ಧ್ವಜ ಹಾಗೂ ಅದರ ಅಧ್ಯಕ್ಷರ ಫೋಟೋ ಹಾಕಿ ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ. ಈ ವಿಚಾರ ತಿಳಿದ ಕೂಡಲೇ ತಜ್ಞರ ತಂಡ ಹ್ಯಾಕರ್ ಗಳ ಪೋಸ್ಟ್ ಅನ್ನು  ತೆಗೆದು ಹಾಕಿದ್ದು, ತಾಂತ್ರಿಕ ದೋಷ ಸರಿಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹ್ಯಾಕ್ ಸಂದರ್ಭದಲ್ಲಿ ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆ ಕೆಲಸ ಸಮಯ ಅದೃಶ್ಯವಾಗಿತ್ತು. ತಜ್ಞರ ತಂಡ ಟ್ವಿಟರ್ ಖಾತೆಯಲ್ಲಿನ ತಾಂತ್ರಿಕ ಸಮಸ್ಯೆ  ಸರಿಪಡಿಸಿದ ಬಳಿಕ ಖಾತೆಯನ್ನು ಪುನಃ ಚಾಲನೆ ಮಾಡಲಾಗಿದೆ. 
ಪಾಕಿಸ್ತಾನದ ಸೈಬರ್ ದಾಳಿಗೆ ಭಾರತ ತುತ್ತಾಗುತ್ತಿರುವುದು ಇದೇ ಮೊದಲೇನಲ್ಲ..2016ರಲ್ಲಿ ಭಾರತ ಒಟ್ಟು 199 ಸರ್ಕಾರಿ ವೆಬ್ ಸೈಟ್ ಗಳು ಪಾಕ್ ಸೈಬರ್ ದಾಳಿಕೋರರ ದಾಳಿಗೆ ತುತ್ತಾಗಿತ್ತು. ಈ ಬಗ್ಗೆ ಸ್ವತಃ ಕೇಂದ್ರ ಗೃಹ  ಇಲಾಖೆ ಸಂಸತ್ ಗೆ ಮಾಹಿತಿ ನೀಡಿತ್ತು. ಇದಕ್ಕೂ ಮೊದಲು ಅಂದರೆ 2013ರಿಂದ 2016ರವರೆಗೂ 700ಕ್ಕೂ ಅಧಿಕ ಸರ್ಕಾರಿ ವೆಬ್ ಸೈಟ್ ಗಳು ಪಾಕಿಸ್ತಾನದ ಸೈಬರ್ ದಾಳಿಕೋರರ ದಾಳಿಗೆ ತುತ್ತಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com