ನಾಪತ್ತೆಯಾಗಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ!

ಸೋಮವಾರ ನಾಪತ್ತೆಯಾಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಹ್ಮದಾಬಾದ್ ನ ಶಹಿಬಾಗ್ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹ್ಮದಾಬಾದ್: ಸೋಮವಾರ ನಾಪತ್ತೆಯಾಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಹ್ಮದಾಬಾದ್ ನ ಶಹಿಬಾಗ್ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಿನ್ನೆ ಸಂಜೆ ಪಾರ್ಕ್ ಗೆ ತೆರಳಿದ ತೊಗಾಡಿಯಾ ಅವರಿಗೆ ಅನಾರೋಗ್ಯವಾಗಿದ್ದು ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರನ್ನು ಸ್ಥಳೀಯರು ಕೂಡಲೇ ಅಹ್ಮದಾಬಾದ್ ನ ಚಂದ್ರಮಣಿ  ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಸ್ತುತ ತೊಗಾಡಿಯಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರಮಣಿ ಆಸ್ಪತ್ರೆಯ ನಿರ್ದೇಶಕ ರೂಪ್ ಕುಮಾರ್ ಅಗರ್ವಾಲ್ ಅವರು, ತೊಗಾಡಿಯಾ ಅವರು ಲೋ ಬ್ಲಡ್ ಶುಗರ್ ನಿಂದಾಗಿ ಬಳಲಿದ್ದಾರೆ. ಹೀಗಾಗಿ ಅವರು ಪಾರ್ಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಗೆ  ತಲುಪಿರಬಹುದು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಪೊಲೀಸರು ತೊಗಾಡಿಯಾ ಅವರಿಗೆ ವಾರಂಟ್ ಜಾರಿ ಮಾಡಿದ್ದರು. ಅಹ್ಮದಾಬಾದ್ ನಲ್ಲಿರುವ ವಿಹೆಚ್ ಪಿ ಪ್ರಧಾನ ಕಚೇರಿಗೆ ವಾರಂಟ್ ನೀಡಲಾಗಿತ್ತು.  ಅಂದು ಮಧ್ಯಾಹ್ಮವೇ ತೊಗಾಡಿಯಾ ಅವರು ಏಕಾಂಗಿಯಾಗಿ ಪಾರ್ಕ್ ತೆರಳಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com