ಗಾಳಿಪಟ ಹಾರಿಸಿ ಸಂಭ್ರಮಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯುಹ ಅವರು ಗುಜರಾತಿನ ಅಹ್ಮದಾಬಾದಿನಲ್ಲಿಂದು ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಗಾಳಿ ಪಟ ಹಾರಿಸಿ ಸಂಭ್ರಮಿಸಿದ ಇಸ್ರೇಲ್ ಪ್ರಧಾನಿ
ಗಾಳಿ ಪಟ ಹಾರಿಸಿ ಸಂಭ್ರಮಿಸಿದ ಇಸ್ರೇಲ್ ಪ್ರಧಾನಿ

ಅಹ್ಮದಾಬಾದ್: ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯುಹ ಅವರು ಗುಜರಾತಿನ ಅಹ್ಮದಾಬಾದಿನಲ್ಲಿಂದು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಗಾಳಿಪಟದಂತೆ ಭಾರತ- ಇಸ್ರೇಲ್ ನಡುವಣ ಸ್ನೇಹ ಸಂಬಂಧ ಮುಗಿಲೆತ್ತರಕ್ಕೆ ಹಾರಲಿದೆ. ಇದರಿಂದ ನಾಗರಿಕರಿಗೆ ಮಾತ್ರವಲ್ಲದೇ, ಇಡೀ ಮನುಕುಲಕ್ಕೆ ಒಳಿತಾಗಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಟ್ವಿಟ್ ಮಾಡಿದ್ದಾರೆ.

ಬೆಂಜಮಿನ್ ನೇತಾನ್ಯುಹ ನಾಳೆ ಮುಂಬಯಿ ಭೇಟಿ ನೀಡಲಿದ್ದು, ಉದ್ಯಮಿಗಳೊಂದಿಗೆ ಉಪಹಾರ ಸೇವಿಸಿ, ಮುಂಬಯಿ ದಾಳಿ ವೇಳೆ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಆರ್ಪಿಸಲಿದ್ದಾರೆ. ಬಳಿಕ 'ಶಲೋಮ್ ಬಾಲಿವುಡ್' ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅನಂದ್ ಮಹೀಂದ್ರಾ, ಅಜಯ್ ಪಿರಾಮಲ್, ಅಡಿ ಗೋದ್ರೆಜ್, ಸೇರಿದಂತೆ ಆಯ್ದ ಉದ್ಯಮಿಗಳೊಂದಿಗೆ ಬೆಂಜಮಿನ್ ನೇತಾನ್ಯುಹ ಉಪಹಾರ ಸೇವಿಸಿ, ಭಾರತ- ಇಸ್ರೇಲ್  ಉದ್ಯಮ ಶೃಂಗಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು,  ಇಸ್ರೇಲ್ ಭೇಟಿ ವೇಳೆ ಹೈಪಾ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ಅವರ ಬಲಿದಾನ ಉಭಯದೇಶಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿದೆ ಎಂದು  ಹೇಳಿದ್ದರು. ಭಾರತೀಯ ಸೇನೆ ಕೂಡಾ ಪ್ರತಿವರ್ಷ ಸೆಪ್ಟೆಂಬರ್ 23 ರಂದು ಹೈಪಾ ದಿನ ಆಚರಿಸುವ ಮೂಲಕ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುತ್ತಾ ಬರಲಾಗಿದೆ.

ಅಹ್ಮದಾಬಾದಿನ ಡಿಯೋ ದೊಲೇರಾ ಗ್ರಾಮದಲ್ಲಿ ಸ್ಥಾಪಿಸಿರುವ ಐ ಕ್ರಿಯೇಟ್ ಸೆಂಟರನ್ನು  ಉದ್ಘಾಟಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು, ಹೈಪಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಭಾರತೀಯರಲ್ಲಿ ಹೆಚ್ಚಿನವರು ಗುಜರಾತಿನವರೇ ಆಗಿದ್ದಾರೆ. ಹೀಗಾಗಿ ಗುಜರಾತಿಗೆ ಧನ್ಯವಾದ ಆರ್ಪಿಸುವುದಾಗಿ ಹೇಳಿದರು.ಇದಕ್ಕೂ ಮುನ್ನ ಬೆಂಜಮಿನ್ ನೇತಾನ್ಯಹು ಭಾರತಕ್ಕೆ ಭರ್ಜರಿ ಉಡುಗೊರೆ ನೀಡಿದ್ದು, ಸಮುದ್ರದ ನೀರನ್ನು ಕುಡಿಯುವ ನೀರಾಗಿ ಶುದ್ಧೀಕರಿಸುವ ಮೊಬೈಲ್ ಘಟಕವನ್ನು ಭಾರತಕ್ಕೆ  ನೀಡಿದರು.

ಈ ಮೊಬೈಲ್ ಗಾಲ್ ವಾಹನ ಇಸ್ರೇಲ್ ನಿಂದ ಭಾರತಕ್ಕೆ ಆಗಮಿಸಿದ್ದು, ಬನಸ್ಕಾಂತ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು. ನಂತರ ಅತ್ಯಾಧುನಿಕ ಬೀಜ ಉತ್ಪಾದನಾ  ಘಟಕ ಸ್ಥಾಪನೆ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದರು.

ಬೆಳಿಗ್ಗೆ ಅಹ್ಮದಾಬಾದಿಗೆ ಆಗಮಿಸಿದ ಬೆಂಜಮಿನ್ ನೇತಾನ್ಯಾಹು ಹಾಗೂ ಅವರ ಪತ್ನಿಗೆ ಪ್ರಧಾನಿ ನರೇಂದ್ರಮೋದಿ ಸ್ವಾಗತಿಸಿದರು. ಬಳಿಕ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೂ ರೋಡ್ ಶೋ ನಡೆಸಿದರು. ಸಬರಮತಿ ಆಶ್ರಮದಲ್ಲಿ ಮಹಾತ್ಮಗಾಂಧಿ ಚರಕದಲ್ಲಿ ಹತ್ತಿದಾರ ನೇಯುವ ಮೂಲಕ ನೇತ್ಯಾನಹು ವಿಶಿಷ್ಠ ಅನುಭವ ಪಡೆದರು.ವೀಕ್ಷಕರ ಪುಸ್ತಕದಲ್ಲಿ ಸಹಿ ಹಾಕಿದ ನೇತಾನಾಹ್ಯು ದಂಪತಿ, ಭೇಟಿ ವೇಳೆ ಮಹಾನ್ ಮಾನವತಾವಾದಿ ಮಹಾತ್ಮಗಾಂಧಿ ಅವರ ತತ್ತ್ವ ಆದರ್ಶಗಳಿಂದ ಪ್ರಭಾವಿತನಾಗಿರುವುದಾಗಿ ಪುಸ್ತಕದಲ್ಲಿ ನಮೂದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com