ಪ್ರಧಾನಿ ಮೋದಿ-ನೆತನ್ಯಾಹು ರೋಡ್ ಶೋ: ಅಹಮದಾಬಾದ್'ನಲ್ಲಿ ಹೆಚ್ಚಿದ ಭದ್ರತೆ

ಭಾರತ ಪ್ರವಾಸ ಕೈಗೊಂಡಿರುವ ಇಸ್ರೇಲ್ ರಾಷ್ಟ್ರದ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ಅಹಮದಾಬಾದ್'ಗೆ ಬುಧವಾರ ಭೇಟಿ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ...
ಪ್ರಧಾನಿ ಮೋದಿ ಮತ್ತು ನೇತಾನ್ಯಹು
ಪ್ರಧಾನಿ ಮೋದಿ ಮತ್ತು ನೇತಾನ್ಯಹು
ಅಹಮದಾಬಾದ್: ಭಾರತ ಪ್ರವಾಸ ಕೈಗೊಂಡಿರುವ ಇಸ್ರೇಲ್ ರಾಷ್ಟ್ರದ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ಅಹಮದಾಬಾದ್'ಗೆ ಬುಧವಾರ ಭೇಟಿ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನೆತನ್ಯಾಹು ಅಹಮದಾಬಾದ್'ಗೆ 2 ದಿನಗಳ ಭೇಟಿಗಾಗಿ ಆಗಮಿಸಲಿದ್ದು, ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆಗೆ 14 ಕಿ.ಮೀ ರೋಡ್ ಶೋ ಕೂಡ ನಡೆಸಲಿದ್ದಾರೆ. 
ಇಬ್ಬರೂ ನಾಯಕರು ಸಾಗುವ ಹಾದಿಯಲ್ಲಿ 50 ಕಡೆ ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಇದರ ಮೂಲಕ ವಿವಿಧ ರಾಜ್ಯಗಳ ಕಲಾವಿದರು ಗಣ್ಯರಿಗೆ ಸ್ವಾಗತವನ್ನು ಕೋರಲಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. 
ಇದಾದ ಬಳಿಕ ನೆತನ್ಯಾಹು ಅವರನ್ನು ಪ್ರಧಾನಿ ಮೋದಿಯವರು ಮಹಾತ್ಮ ಗಾಂಧೀಜಿಯವರ ಸಾಬರಮತಿ ಆಶ್ರಮಕ್ಕೂ ಕರೆದುಕೊಂಡು ಹೋಗಲಿದ್ದಾರೆ. 
ಪ್ರಧಾನಿ ಮೋದಿ ಮತ್ತು ನೆತನ್ಯಾಹು ರೋಡ್ ಹಿನ್ನಲೆಯಲ್ಲಿ ಅಹಮದಾಬಾದ್ ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಇಸ್ರೇಲ್ ಸ್ನೈಪರ್ಸ್, ಚೇತಕ್ ಕಮಾಂಡೋ, ಕ್ವಿಕ್ ರೆಸ್ಪಾನ್ಸ್ ಟೀಂ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಪೊಲೀಸರು ಸೇರಿದಂತೆ ಒಟ್ಟು 12 ತಂಡಗಳು ಭದ್ರತೆಯನ್ನು ಒದಗಿಸಲಿವೆ. 

ರೋಡ್ ಶೋ ಬಳಿಯಿರುವ ಕಟ್ಟಡಗಳ ಮೇಲೆಯೂ ವಿಶೇಷ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಮೋದಿ ಹಾಗೂ ನೆತನ್ಯಾಹು ಅವರು ಆಶ್ರಮ ಪ್ರವೇಶ ಮಾಡುತ್ತಿದ್ದಂತೆಯೇ ಸಬರಮತಿ ನದಿ ಬಳಿ ಸ್ಪೀಡ್ ಬೋಟ್ ಗಳು ಭದ್ರತಾ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com