ಹೆಲ್ಮೆಟ್ ಧರಿಸಿದೆ ಬೈಕ್ ರೈಡ್: ಕ್ಷಮಾಪಣೆ ಕೇಳಿ, ದಂಡ ಕಟ್ಟಿದ ಬಿಜೆಪಿ ಸಂಸದ

ಮಧ್ಯಪ್ರದೇಶದ ಸಂಸದರೊಬ್ಬರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದು ಪರಿಣಾಮ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ...
ಅಲೋಕ್ ಸಂಜರ್
ಅಲೋಕ್ ಸಂಜರ್
ಭೋಪಾಲ್: ಮಧ್ಯಪ್ರದೇಶದ ಸಂಸದರೊಬ್ಬರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದು ಪರಿಣಾಮ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. 
ಬಿಜೆಪಿ ಸಂಸದ ಅಲೋಕ್ ಸಂಜರ್ ಹಾಗೂ ಅವರ ಹಿಂಬದಿ ಸವಾರರಾಗಿ ಕುಳಿತಿದ್ದ ಶಾಸಕ ಸುರೇಂದ್ರನಾಥ್ ಸಿಂಗ್ ಇಬ್ಬರೂ ಹೆಲ್ಮೆಟ್ ಧರಿಸದೇ ಬೈಕ್ ರ್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಭೋಪಾಲ್ ಟ್ರಾಫಿಕ್ ವಿಭಾಗದ ವಾಟ್ಸ್ ಆಪ್ ನಂಬರಿಗೆ ಫೋಟೋ ಸಮೇತ ದೂರು ನೀಡಿದ್ದರು. 
ಈ ದೂರಿನ ಹಿನ್ನೆಲೆಯಲ್ಲಿ ಟ್ರಾಫಿಕ್ ಎಎಸ್ಪಿ ಮಹೇಂದ್ರ ಜೈನ್ ಅವರು ಸಂಸದ ಅಲೋಕ್ ಸಂಜರ್ ವಿರುದ್ಧ ರಶೀದಿ ಜಾರಿಗೊಳಿಸಿ 250 ರುಪಾಯಿ ದಂಡ ಕಟ್ಟುವಂತೆ ಆದೇಶಿಸಿದ್ದಾರೆ. 
ರಶೀದಿ ಗಮನಿಸಿದ ಸಂಜರ್ ನಿನ್ನೆ ಸಂಜೆ ಠಾಣೆಗೆ ಬಂದು ದಂಡ ಪಾವತಿಸಿದ್ದಾರೆ. ಜನಸೇವಕನಾಗಿ ಕಾನೂನು ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದು ಅಲೋಕ್ ಸಂಜರ್ ಹೇಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com