ಪದ್ಮಾವತ್ ' ಚಿತ್ರ ಪ್ರದರ್ಶನ ನಿಷೇಧಿಸಿ ನಾಲ್ಕು ರಾಜ್ಯಗಳಲ್ಲಿ ಹೊರಡಿಸಿರುವ ಆದೇಶ ರದ್ದು ; ಸುಪ್ರೀಂಕೋರ್ಟ್

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ' ಪದ್ಮಾವತ್ ' ಚಿತ್ರ ಪ್ರದರ್ಶನವನ್ನು ನಿಷೇಧಿಸಿ ನಾಲ್ಕು ರಾಜ್ಯಗಳಲ್ಲಿ ಹೊರಡಿಸಿರುವ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು, ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ.
ಪದ್ಮಾವತ್   ಚಿತ್ರ ಪ್ರದರ್ಶನ ನಿಷೇಧಿಸಿ ನಾಲ್ಕು ರಾಜ್ಯಗಳಲ್ಲಿ ಹೊರಡಿಸಿರುವ ಆದೇಶ ರದ್ದು
ಪದ್ಮಾವತ್ ಚಿತ್ರ ಪ್ರದರ್ಶನ ನಿಷೇಧಿಸಿ ನಾಲ್ಕು ರಾಜ್ಯಗಳಲ್ಲಿ ಹೊರಡಿಸಿರುವ ಆದೇಶ ರದ್ದು

ದೆಹಲಿ; ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ' ಪದ್ಮಾವತ್ ' ಚಿತ್ರ ಪ್ರದರ್ಶನವನ್ನು ನಿಷೇಧಿಸಿ ನಾಲ್ಕು ರಾಜ್ಯಗಳಲ್ಲಿ ಹೊರಡಿಸಿರುವ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು, ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. 

ಹರಿಯಾಣ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ ಹಾಗೂ ಉತ್ತರ್ ಖಂಡ್ ರಾಜ್ಯಗಳಲ್ಲಿ  ಚಿತ್ರ ಪ್ರದರ್ಶನ ನಿಷೇಧಿಸಿರುವುದನ್ನು ವಿರೋಧಿಸಿ ಚಿತ್ರ ನಿರ್ಮಾಪಕರು ಸುಪ್ರೀಂಕೋರ್ಟ್ ಗೆ ನಿನ್ನೆ ಅರ್ಜಿ ಸಲ್ಲಿಸಿದ್ದರು.  ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ , ಸೆನ್ಸಾರ್ ಬೋರ್ಡ್ ಸೂಚನೆಯಂತೆ ಈಗಗಾಲೇ ಚಿತ್ರದ ಟೈಟಲ್ ನ್ನು ಬದಲಿಸಲಾಗಿದೆ ಆದಾಗ್ಯೂ, ಪ್ರಮುಖ ನಾಲ್ಕು ರಾಜ್ಯಗಳಲ್ಲಿ ಚಿತ್ರ ಪ್ರದರ್ಶನವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. 
ರಾಜ್ಯದ ಎಲ್ಲಾ ಕಡೆ ಚಿತ್ರ ಪ್ರದರ್ಶನ ನಿಷೇಧಿಸಿಲ್ಲ, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಾರದೆಂಬ   ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಮಾತ್ರ ಚಿತ್ರಪ್ರದರ್ಶನ ನಿಷೇಧಿಸಿರುವುದಾಗಿ ಪ್ರತಿವಾದಿ ವಾದ ಮಂಡಿಸಿದರು. ವಾದ, ವಿವಾದ ಮಂಡಿಸಿದ ನ್ಯಾಯಾಲಯ,  ಚಿತ್ರ ಪ್ರದರ್ಶನದ ನಿಷೇಧ ತೆರವುಗೊಳಿಸಿ, ಚಿತ್ರ ಪ್ರದರ್ಶಿಸಲು ಅವಕಾಶ ಕೊಡುವಂತೆ ಆದೇಶಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com