'ಭಾರತ ಪ್ರಚೋದಿತ ಭಯೋತ್ಪಾದನೆ' ಎಂಬ ಪದ ಕೇಳೇ ಇಲ್ಲ; ಪಾಕ್ ಗೆ ಅಮೆರಿಕ ಟಾಂಗ್

'ಭಾರತ ಪ್ರಚೋದಿತ ಭಯೋತ್ಪಾದನೆ' ಎಂಬ ಪದ ಕೇಳೇ ಇಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಆರೋಪವನ್ನು ಅಮೆರಿಕ ಸ್ಪಷ್ಟವಾಗಿ ತಿರಸ್ಕರಿಸಿದೆ.
ರೈಸಿನಾ ಸಂವಾದದಲ್ಲಿ ಪೇಟ್ರಿಯಸ್
ರೈಸಿನಾ ಸಂವಾದದಲ್ಲಿ ಪೇಟ್ರಿಯಸ್
ನವದೆಹಲಿ: 'ಭಾರತ ಪ್ರಚೋದಿತ ಭಯೋತ್ಪಾದನೆ' ಎಂಬ ಪದ ಕೇಳೇ ಇಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಆರೋಪವನ್ನು ಅಮೆರಿಕ ಸ್ಪಷ್ಟವಾಗಿ ತಿರಸ್ಕರಿಸಿದೆ.
ದೆಹಲಿಯಲ್ಲಿ ನಡೆಯುತ್ತಿರುವ ವಾರ್ಷಿಕ ರೈಸಿನಾ ಸಂವಾದದಲ್ಲಿ ಭೂರಾಜಕೀಯ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕದ ಕೇಂದ್ರ ಗುಪ್ತಚರ ಇಲಾಖೆ(ಸಿಐಎ) ಮಾಜಿ ನಿರ್ದೇಶಕ ಡೇವಿಡ್‌ ಪೆಟ್ರಿಯಸ್‌  ಅವರು, ಭಾರತ ಪ್ರಚೋದಿತ ಭಯೋತ್ಪಾದನೆ ಎಂಬ ಶಬ್ದವನ್ನು ತಮ್ಮ ಇಡೀ ವೃತ್ತಿಯಲ್ಲಿ ಎಂದೂ ಕೇಳಿಲ್ಲ ಎಂದು ಹೇಳಿದ್ದಾರೆ. 'ಸಿಐಎ ನಿರ್ದೇಶಕನಾಗಿ ಹಾಗೂ ಅಂತರಾಷ್ಟ್ರೀಯ ಶಾಂತಿ ಪಾಲನಾ ಪಡೆಯ ಕಮಾಂಡರ್‌ ಆಗಿ  ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡಿ ಅನುಭವವಿರುವ ನಾನೆಂದೂ ಭಾರತ ಪ್ರಚೋದಿತ ಭಯೋತ್ಪಾದನೆ ಎಂದು ಕೇಳಿಲ್ಲ. ಅಂತೆಯೇ ಬಲೂಚಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿದ ಪೇಟ್ರಿಯಸ್ ಅವರು, ಪಾಕ್‌ ಸರ್ಕಾರ  ಹಾಗೂ ಅಲ್ಲಿನ ಸೇನೆ ತಮ್ಮನ್ನು ನಡೆಸಿಕೊಳ್ಳುತ್ತಿರುವ ಕುರಿತಂತೆ ತಮ್ಮ ಪ್ರತಿಕ್ರಿಯೆಯಾಗಿ ಬಲೂಚಿಗಳು ತಮ್ಮ ಪ್ರತಿಕ್ರಿಯೆ ರೂಪದಲ್ಲಿ ಪ್ರತ್ಯೇಕತಾವಾದಕ್ಕೆ ಇಳಿದಿದ್ದಾರೆ ಎಂದು ಪೆಟ್ರೆಯಸ್‌ ತಿಳಿಸಿದ್ದಾರೆ.
ಪೆಟ್ರಿಯಸ್‌ 2010-2011ರಲ್ಲಿ ಶಾಂತಿ ಪಾಲನಾ ಪಡೆಯನ್ನು ಮುನ್ನಡೆಸಿದ್ದರೆ ಸೆಪ್ಟೆಂಬರ್‌ 6,2011ರಿಂದ ನವೆಂಬರ್‌ ವರೆಗೆ ಅಮೆರಿಕ ಗುಪ್ತಚರ ಇಲಾಖೆ ಸಿಐಎ ನಿರ್ದೇಶಕರಾಗಿದ್ದರು.
ಪೇಟ್ರಿಯಸ್ ಅವರ ಹೇಳಿಕೆ ಪಾಕಿಸ್ತಾನ ಸರ್ಕಾರಕ್ಕೆ ಮತ್ತೊಂದು ಮುಜುಗರವನ್ನುಂಟು ಮಾಡಿದ್ದು, ಈ ಮೂಲಕ ಬಲೂಚಿಸ್ತಾನದಲ್ಲಿ ಭಾರತ ಅಶಾಂತಿ ಸೃಷ್ಟಿಸಲು ನೋಡುತ್ತಿದೆ ಎಂದು ಆರೋಪ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರೀ  ಹೊಡೆತ ಬಿದ್ದಂತಾಗಿದೆ. ಅತ್ಯಾಚಾರಗಳು, ಕೊಲೆಗಳು ಸೇರಿದಂತೆ ಪಾಕಿಸ್ತಾನ ಸೇನೆ ತಮ್ಮ ಮೇಲೆ ಸಾಕಷ್ಟು ಮಾನವೀಯ  ಉಲ್ಲಂಘನೆಗಳನ್ನು ಮಾಡಿದೆ ಎಂದು ಬಲೂಚಿಗಳು ಆಫಾದನೆ ಮಾಡುತ್ತಲೇ ಇರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com