"ಪದ್ಮಾವತ್ "ಚಿತ್ರ ಪ್ರದರ್ಶಿಸಲು ಗುಜರಾತ್ ಚಿತ್ರಮಂದಿರದ ಮಾಲೀಕರು ನಕಾರ

ವಿವಾದಿತ ಪದ್ಮಾವತ್ ಚಿತ್ರ ಪ್ರದೇಶಕ್ಕೆ ನಾಲ್ಕು ರಾಜ್ಯಗಳಲ್ಲಿ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ್ದರೂ ಗುಜರಾತಿನ ಮಲ್ಟಿಪ್ಲೆಕ್ಸ್ ಮಾಲೀಕರು ಚಿತ್ರ ಪ್ರದರ್ಶಿಸದಿರಲು ನಿರ್ಧರಿಸಿದ್ದಾರೆ.
ಪದ್ಮಾವತ್ ಚಿತ್ರ ವಿರೋಧಿಸಿ ಪ್ರತಿಭಟನಾ ನಿರತ ಕರ್ನಿ ಸೇನಾ ಸಂಘಟನೆ ಕಾರ್ಯಕರ್ತರು
ಪದ್ಮಾವತ್ ಚಿತ್ರ ವಿರೋಧಿಸಿ ಪ್ರತಿಭಟನಾ ನಿರತ ಕರ್ನಿ ಸೇನಾ ಸಂಘಟನೆ ಕಾರ್ಯಕರ್ತರು

ಗುಜರಾತ್ : ವಿವಾದಿತ ಪದ್ಮಾವತ್ ಚಿತ್ರ ಪ್ರದೇಶಕ್ಕೆ ನಾಲ್ಕು ರಾಜ್ಯಗಳಲ್ಲಿ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ್ದರೂ ಗುಜರಾತಿನ ಮಲ್ಟಿಪ್ಲೆಕ್ಸ್ ಮಾಲೀಕರು ಚಿತ್ರ ಪ್ರದರ್ಶಿಸದಿರಲು ನಿರ್ಧರಿಸಿದ್ದಾರೆ.

ಕರ್ನಿ ಸೇನೆ ಬೆದರಿಕೆ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನದಿಂದ ಹಿಂದೆ ಸರಿಯಲು ನಿರ್ಧಾರ ಕೈಗೊಂಡಿದ್ದಾರೆ. ಪ್ರತಿಯೊಬ್ಬರಲ್ಲೂ  ಆತಂಕ ಮನೆಮಾಡಿದೆ. ಗುಜರಾತ್ ರಾಜ್ಯದಾದ್ಯಂತ ಎಲ್ಲೂ ಪದ್ಮಾವತ್ ಚಿತ್ರ ಪ್ರದರ್ಶನ ಮಾಡದಂತೆ ನಿರ್ಧಾರ ಮಾಡಲಾಗಿದೆ,.

 ಚಿತ್ರ ಪ್ರದರ್ಶಿಸಿ ನಾವು ಏಕೆ ನಷ್ಠ ಅನುಭವಿಸಬೇಕು ಎಂದು ಗುಜರಾತ್ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಪಾಟೇಲ್ ಹೇಳಿದ್ದಾರೆ. ಆದರೆ, ಅಗತ್ಯ ಭದ್ರತೆ ನೀಡುವುದಾಗಿ  ಪೋಲಿಸರು ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಹೇಳಿದ್ದಾರೆ.

 ಪದ್ಮಾವತ್ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಅಭಿಯನಯದ ಪ್ಯಾಡ್ ಮ್ಯಾನ್  ಚಿತ್ರ ಬಿಡುಗಡೆಯನ್ನು ಮುಂದೂಡಿದ್ದರು, ಭದ್ರತೆ ಸಮಸ್ಯೆಯಿಂದಾಗಿ ಚಿತ್ರಮಂದಿರದ ಮಾಲೀಕರು ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಪದ್ಮಾವತಿ ಚಿತ್ರ ಪ್ರದರ್ಶನಕ್ಕೆ ವಿರೋಧಿಸಿ ಗುಜರಾತಿನ ಸುರೇಂದ್ರನಗರ್, ಭಾವನಗರ ಹಾಗೂ ಬನಸ್ಕಾಂತ ಜಿಲ್ಲೆಯಲ್ಲಿ ಕರ್ನಿ ಸೇನಾ, ಗುಜರಾತ್  ಕ್ಷೇತ್ರಿಯ ಸಮಾಜ ಸೇರಿದಂತೆ ಹಲವು ಸಂಘಟನೆಗಳು ಇಂದು ಕೂಡಾ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com