ಬಿಹಾರ: ನಾಲ್ಕು ಕೋಟಿ ಜನರಿಂದ ದಾಖಲೆ ಉದ್ದದ ಮಾನವ ಸರಪಳಿ ರಚನೆ

ರದಕ್ಷಿಣೆ ಹಾಗೂ ಬಾಲ್ಯ ವಿವಾಹದ ಸಮಸ್ಯೆ ವಿರುದ್ಧ ಬಿಹಾರದ ಕೋಟ್ಯಾಂತರ ಜನ ಬೀದಿಗಿಳಿದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಪಾಟ್ನಾ: ವರದಕ್ಷಿಣೆ ಹಾಗೂ ಬಾಲ್ಯ ವಿವಾಹದ ಸಮಸ್ಯೆ ವಿರುದ್ಧ ಬಿಹಾರದ ಕೋಟ್ಯಾಂತರ ಜನ ಬೀದಿಗಿಳಿದಿದ್ದಾರೆ. ಜಗತ್ತಿನ ಅತಿ ಉದ್ದದ ಮಾನವ ಸರಪಣಿ ನಿರ್ಮಿಸುವ ಮೂಲಕ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವ ತಮ್ಮ ಬದ್ದತೆಯನ್ನು ಪ್ರದರ್ಶಿಸಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಎನ್ ಡಿ ಎ ಸರ್ಕಾರದ ಕರೆಗೆ ಓಗೊಟ್ಟ ಜನತೆ ಅಂದಾಜು 13,660 ಕಿ.ಮೀ. ಉದ್ದನೆಯ ದೈತ್ಯ ಮಾನವ ಸರಪಳಿ ರಚಿಸಿದ್ದು ಇದು ರಾಜ್ಯದ 38 ಜಿಲ್ಲೆಗಳನ್ನು ಒಳಗೊಂಡಿತ್ತು. ಮದ್ಯಾಹ್ನ 12ರಿಂದ 12:30ರವರೆಗೆ ಜನರು ಒಬ್ಬೊಬ್ಬರ ಕೈ ಹಿಡಿದು ಸರತಿಯಲ್ಲಿ ನಿಂತಿದ್ದರು. ಒಟ್ಟಾರೆ ನಾಲ್ಕು ಕೋಟಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಟ್ನಾದ ಗಾಂಧಿ ಮೈದಾನದಲ್ಲಿ ಬಲೂನು ಹಾರಿ ಬಿಡುವ ಮೂಲಕ ನಿತೀಶ್ ಕುಮಾರ್ ಮಾನವ ಸರಪಣಿಗೆ ಚಾಲನೆ ನೀಡಿದ್ದರು. ಈ ವೇಳೆ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಸರ್ಕಾರದಲ್ಲಿನ ಇತರೆ ಮಂತ್ರಿಗಳು ಸಹ ಹಾಜರಿದ್ದರು. "ಮಾನವ ಸರಪಣಿಯಲಿ ಹೃದಯಪೂರ್ವಕ ಪಾಲ್ಗೊಳ್ಳುವ ಮೂಲಕ ರಾಜ್ಯದಲ್ಲಿ ವರದಕ್ಷಿಣೆ ಮತ್ತು ಬಾಲ್ಯ ವಿವಾಹಗಳ ಸಾಮಾಜಿಕ ಪಿಡುಗನ್ನು ಶಾಶ್ವತವಾಗಿ ಕೊನೆಗೊಳಿಸಲು ಬೆಂಬಲಿಸಿದ ಬಿಹಾರದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ" ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ವಿರೋಧ ಪಕ್ಷದವರ ಟೀಕೆಗಳನ್ನು ಕುರಿತಂತೆ ಮಾತನಾಡಿದ ನಿತೀಶ್ "ಯಾರು "ಇದನ್ನು ವಿರೋಧಿಸುತ್ತಾರೆಯೋ ಅವರು ತಮ್ಮ ಸ್ವಂತ ಕಾಲನ್ನು ಕಡಿದುಕೊಳ್ಳಲಿದ್ದಾರೆ. " ಎಂದರು.
ಈ ಮುನ್ನ 2017 ರ ಜನವರಿ 21ರಂದು ಬಿಹಾರದಲ್ಲಿ ಮದ್ಯ ನಿಷೇಧದ ವಿಚಾರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾನವ ಸರಪಳಿ ರಚಿಸಲಾಗಿತ್ತು. ನಿತೀಶ್ ಕುಮಾರ್ ಸರಕಾರವು ಏಪ್ರಿಲ್ 2016 ರಲ್ಲಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ ಆದೇಶ ಹೊರಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com