ಕಾಮ್ಲಾ ಮಿಲ್ಸ್ ಅಗ್ನಿ ದುರಂತ ಪ್ರಕರಣ :ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಮುಂಬೈಯಲ್ಲಿ ಕಳೆದ ತಿಂಗಳು ಸಂಭವಿಸಿದ್ದ ಕಾಮ್ಲಾ ಮಿಲ್ಸ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿಸಲಾಗಿದ್ದ ಮೂವರು ಆರೋಪಿಗಳನ್ನು ಇದೇ 25ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮುಂಬೈಯ ಕಾಮ್ಲಾ ಮಿಲ್ಸ್ ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದ ಸಾಂದರ್ಭಿಕ ಚಿತ್ರ
ಮುಂಬೈಯ ಕಾಮ್ಲಾ ಮಿಲ್ಸ್ ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದ ಸಾಂದರ್ಭಿಕ ಚಿತ್ರ
Updated on

ಮುಂಬೈ: ಮುಂಬೈಯಲ್ಲಿ ಕಳೆದ ತಿಂಗಳು  ಸಂಭವಿಸಿದ್ದ ಕಾಮ್ಲಾ ಮಿಲ್ಸ್  ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿಸಲಾಗಿದ್ದ ಮೂವರು ಆರೋಪಿಗಳನ್ನು ಇದೇ 25ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

 ಈ ಪ್ರಕರಣ ಸಂಬಂಧ ಕಾಮ್ಲಮಿಲ್ಸ್ ನ ಪಾಲುದಾರ ರವಿ ಭಂಡಾರಿ, ಅಗ್ನಿ ಶಾಮಕ ದಳದ ಅಧಿಕಾರಿ ರಾಜೇಂದ್ರ ಪಾಟೀಲ್ ಮತ್ತು ನಿರ್ವಾಣ ಹೊಕ್  ಮಾಲೀಕ ಉತ್ಕರ್ಷ್  ಪಾಂಡೆ ಅವರನ್ನು ಬಂಧಿಸಲಾಗಿತ್ತು.

ಈ ಮೂವರನ್ನು ಇಂದು ಬೊಯಿವಾಡ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಧೀಶರು  ಇದೇ 25ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಹಮ್ಮದ್ ಪಠಾಣ್ ತಿಳಿಸಿದ್ದಾರೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಅಜಯ್ ಮೆಹ್ತಾ ನಿನ್ನೆ ಅಗ್ನಿ ದುರಂತ ಸಂಬಂಧದ ವರದಿಯನ್ನು   ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ  ಸಲ್ಲಿಸಿದ್ದ ನಂತರ ಆರೋಪಿಗಳನ್ನು ಬಂಧಿಸಲಾಗಿತ್ತು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com