ದಾವೋಸ್ ನಲ್ಲಿ ಪ್ರಧಾನಿ: 32 ಬಾಣಸಿಗರಿಂದ ಸಾವಿರ ಕೆಜಿ ಮಸಾಲೆ ಬಳಸಿ ವಿಶೇಷ ಭಕ್ಷ್ಯ ತಯಾರಿ

ಸ್ವಿಡ್ಜರ್ ಲ್ಯಾಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸಸಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿಗಾಗಿ
ದಾವೋಸ್ ನಲ್ಲಿ ಪ್ರಧಾನಿ
ದಾವೋಸ್ ನಲ್ಲಿ ಪ್ರಧಾನಿ
ದಾವೋಸ್:  ಸ್ವಿಡ್ಜರ್ ಲ್ಯಾಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ  ಶೃಂಗದಲ್ಲಿ ಭಾಗವಹಿಸಸಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿಗಾಗಿ ತಾಜ್ ಗ್ರೂಪ್ ನ ಬಾಣಸಿಗ ತಂಡವು ವಿಶಿಷ್ಟ ಪಾಕಗಳ ತಯಾರಿಯಲ್ಲಿ ತೊಡಗಿದೆ.
ಮುಖ್ಯವಾಗಿ ಭಾರತೀಯ ತಿನಿಸುಗಳನ್ನು ಒಳಗೊಂಡಿರುವ, ಈ ಪಾಕ ವೈವಿದ್ಯವು ದಾವೋಸ್ ಕಾರ್ಯಕ್ರಮ ವೇದಿಕೆಗಳ ಮೂರು ವಿವಿಧ ಸ್ಥಳಗಳಲ್ಲಿ ವಿತರಣೆಯಾಗಲಿದೆ. " ಮೋದಿ ಸಸ್ಯಾಹಾರವನ್ನೇ ಇಷ್ಟಪಡುವವರೆಂದು ನಮಗೆ ತಿಳಿಸಲಾಗಿದ್ದು ನಾವು ತಯಾರಿಸುವ ಪಾಕವು ಅವರ  ತವರಿನಲ್ಲಿ ತಿನ್ನಬಹುದಾದ ಅಡಿಗೆಯಷ್ಟೇ ರುಚಿಯಾಗಿರಲಿದೆ" ಎಂದು ಈ ವಿಶೇಷ ಬಾಣಸಿಗ ತಂಡದ ಮುಖ್ಯಸ್ಥರಾದ ರಘು ದಿಯೋರಾ ಎ ಎನ್ ಐ ಗೆ ಹೇಳಿದ್ದಾರೆ.
"ಇಲ್ಲಿನ ಮಸಾಲೆಗಳು ವಿಭಿನ್ನವಾಗಿವೆ ಆದ ಕಾರಣ ಇಲ್ಲಿ ಭಾರತೀಯ ಭಕ್ಷ್ಯಗಳನ್ನು ತಯಾರಿಸಲು ತುಸು ಕಷ್ಟ ಎಂದು ಅವರು ಹೇಳಿದರು. ನಾವು ಭಾರತ ತಂದದಲ್ಲಿನ ಸುಮಾರು 12,000 ಜನರಿಗೆ ಪಾಕ ತಯಾರಿಸಲಿದ್ದೇವೆ. ಇದಕ್ಕಾಗಿ 32 ಬಾಣಸಿಗ ಮತ್ತು ಮ್ಯಾನೇಜರ್ ಗಳ ತಂಡವನ್ನು ನಾವು ಹೊಂದಿದ್ದೇವೆ. ಪ್ರಧಾನಿ ಮೋದಿ ಅವರು ಮೂರು ವಿಭಿನ್ನ ಸ್ಥಳಗಳಲ್ಲಿ ನಮ್ಮ ಆಹಾರವನ್ನು ಸೇವಿಸಾಲಿದ್ದಾರೆ. ಈ ಪಾಕ ತಯಾರಿಗಾಗಿ ಭಾರತದಿಂದ ಸುಮಾರು 1,000  ಕೆ.ಜಿ. ಮಸಾಲೆಗಳನ್ನು ತರಲಾಗಿದೆ, ಕೆಲವೊಂದು ಸ್ವತಃ ತಂದಿದ್ದರೆ ಇನ್ನು ಕೆಲವಷ್ಟು  ಕೊರಿಯರ್ ಮೂಲಕ ತರಿಸಲಾಗಿದೆ"
ತಾಜ್ ಕೃಷ್ಣ, ಹೈದರಾಬಾದ್ ನ ಕಾರ್ಯನಿರ್ವಾಹಕ ಬಾಣಸಿಗ ನಿತಿನ್ ಮಾಥುರ್ ಮತ್ತು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಮ್ಯಾನೇಜರ್ ನೆವಿಲ್ಲೆ ಪಿಮೆಂಟೋ ಅವರೊಂದಿಗೆ ದಿಯೋರಾ ಅವರು ವಿವಿಧ ಸ್ಥಳಗಳಲ್ಲಿ ಬಾಣಸಿಗರ ತಂಡವನ್ನು ಮುನ್ನಡೆಸಲಿದ್ದಾರೆ.
ಶೃಂಗ ಸಭೆಯ ಆರಂಭಿಕ ದಿನವಾದ ಮಂಗಳವಾರ ಪ್ರಧಾನಿ ಮೋದಿ ಪ್ರಧಾನ ಭಾಷಣವನ್ನು ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com