ಚೀನಾದಿಂದ ನೆಪಾಳಕ್ಕೆ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆ!

ಚೀನಾ ನೇಪಾಳಕ್ಕೆ 32,000 ಸೆಟ್ ಗಳಷ್ಟು ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಕಳಿಸಿಕೊಟ್ಟಿದೆ.
ಚೀನಾ
ಚೀನಾ
Updated on: 
ಕಠ್ಮಂಡು: ಚೀನಾ ನೇಪಾಳಕ್ಕೆ 32,000 ಸೆಟ್ ಗಳಷ್ಟು ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಕಳಿಸಿಕೊಟ್ಟಿದೆ. 
ಹವಾಮಾನ ಬದಲಾವಣೆ ವಿರುದ್ಧ ಹೋರಾಡುವುದಕ್ಕೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾ ನೇಪಾಳಕ್ಕೆ ಸಹಕಾರ ನೀಡಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ನೇಪಾಳದ ಅಧಿಕಾರಿ ರಾಮ್ ಪ್ರಸಾದ್ ಲ್ಯಾಮ್ಸಾಲ್, ಚೀನಾ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದು, ಪರಿಸರ ಹಾಗೂ ಹವಾಮಾನ ಬದಲಾವಣೆ ವಿರುದ್ಧ ಹೋರಾಡುವುದಕ್ಕೆ ಸಹಕಾರಿ, ಅಷ್ಟೇ ಅಲ್ಲದೇ ನಮ್ಮ ಜನರ ಆರೋಗ್ಯ ದೃಷ್ಟಿ ಹಾಗೂ ಸಮಯ ಉಳಿಸುವುದಕ್ಕೂ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ. 
2015 ರಲ್ಲಿ ಸಂಭವಿಸಿದ್ದ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪ್ರತಿ ಜಿಲ್ಲೆಗೂ ಪರ್ಯಾಯ ವಿದ್ಯುತ್ ಉತ್ತೇಜನ ಕೇಂದ್ರ (ಎಸಿಪಿಸಿ)ಕ್ಕೆ ಚೀನಾ ನೀಡಿರುವ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಕಳಿಸಿಕೊಡಲಾಗುತ್ತದೆ ಎಂದು ನೇಪಾಳ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com