ಪ್ರಧಾನಿ ಮೋದಿ ಜೊತೆ ದಾವೂಸ್ ಗೆ ತೆರಳಿದ ಮಹಾ ಸಿಎಂ ದೇವೇಂದ್ರ ಫಡ್ನವೀಸ್!

ಜ.22 ರಂದು ದಾವೂಸ್ ನಲ್ಲಿ 48 ನೇ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚಾಲನೆ ಸಿಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ತೆರಳಿದ್ದಾರೆ.
Devendra Fadnavis
Devendra Fadnavis
Updated on: 
ಜ.22 ರಂದು ದಾವೂಸ್ ನಲ್ಲಿ 48 ನೇ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚಾಲನೆ ಸಿಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ತೆರಳಿದ್ದಾರೆ. 
ಸಮ್ಮೇಳನದಲ್ಲಿ ವಿಶ್ವ ಬ್ಯಾಂಕ್ ನಿರ್ದೇಶಕರುಗಳೊಂದಿಗೆ ಹಾಗೂ ಜಾಗತಿ ಮಟ್ಟದ ಟಾಪ್ ಸಂಸ್ಥೆಗಳ ಕಾರ್ಯನಿರ್ವಾಹಕರುಗಳೊಂದಿಗೆ ಮಾತನಾಡಲಿದ್ದಾರೆ. ಈ ವೇಳೆ ಮಹಾರಾಷ್ಟ್ರದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಸಂಸ್ಥೆಗಳ ಕಾರ್ಯನಿರ್ವಾಹಕರುಗಳಿಗೆ ತಿಳಿಸಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಮಹಾರಾಷ್ಟ್ರದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಲಿದ್ದಾರೆ. 
2015 ರ ದಾವೂಸ್ ಡಬ್ಲ್ಯೂಇಎಫ್ ನಲ್ಲಿಯೂ ಭಾಗವಹಿಸಿದ್ದ ಫಡ್ನವೀಸ್ 
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ 2015 ರಲ್ಲಿ ನಡೆದಿದ್ದ ದಾವೂಸ್ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿಯೂ ಭಾಗವಹಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com