ಘಟನೆ ನಡೆದ ಬೆನ್ನಲ್ಲೇ ಬೂಟು ಎಸೆದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಒವೈಸಿ, 'ಬೂಟು ಎಸೆಯುವವರು ಗಾಂಧಿ, ಧಾಬೋಲ್ಕರ್, ಗೋವಿಂದ್ ಪನ್ಸಾರೆ ಹಂತಕರ ಹಿಂಬಾಲಕರು' ಎಂದು ಹೇಳಿದರು. ಅಲ್ಲದೆ "ನನ್ನ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಾನು ನನ್ನ ಜೀವವನ್ನೇ ಅರ್ಪಿಸಲು ನಾನು ಸಿದ್ಧನಿದ್ದೇನೆ. ಇಂತಹ ಕೃತ್ಯ ಎಸಗುವವರೆಲ್ಲ ಹತಾಶ ವ್ಯಕ್ತಿಗಳಾಗಿದ್ದು, ಇವರಿಗೆ ಸರ್ಕಾರ ತ್ರಿವಳಿ ತಲಾಕ್ ಬಗ್ಗೆ ಕೈಗೊಂಡ ನಿರ್ಧಾರ ಜನರಿಗೆ ಅದರಲ್ಲೂ ವಿಶೇಷವಾಗಿ ಮುಸ್ಲಿಮರಿಗೆ ಸ್ವೀಕೃತವಾಗಿಲ್ಲ ಎಂಬುದು ತಿಳಿಯುತ್ತಿಲ್ಲ. ಇಂತಹ ಘಟನೆಗಳು ನಮ್ಮನ್ನು ನಿಜ ನುಡಿಯುವುದರಿಂದ ತಡೆಯಲಾರವು ಎಂದು ಓವೈಸಿ ಹೇಳಿದ್ದಾರೆ.