ನಿಯಮ-ಆಧಾರಿತ ಸಮಾಜದ ಆಸಿಯನ್ ರಾಷ್ಟ್ರಗಳ ದೂರದೃಷ್ಟಿಯನ್ನು ಭಾರತ ಗೌರವಿಸುತ್ತದೆ: ಪ್ರಧಾನಿ ಮೋದಿ

ಭಾರತ ಮತ್ತು ಆಸಿಯಾನ್ ನಾಯಕರು ಇಂದು ಕರಾವಳಿ ಭದ್ರತೆ, ಸಂಪರ್ಕ ಮತ್ತು ಪರಸ್ಪರ ವ್ಯಾಪಾರ ವ್ಯವಹಾರವನ್ನು ಹೆಚ್ಚಿಸಲು ಮಾರ್ಗಗಳನ್ನು ಕುರಿತು ಚರ್ಚಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ಭಾರತ ಮತ್ತು ಆಸಿಯಾನ್ ನಾಯಕರು ಇಂದು ಕರಾವಳಿ ಭದ್ರತೆ, ಸಂಪರ್ಕ ಮತ್ತು ಪರಸ್ಪರ ವ್ಯಾಪಾರ ವ್ಯವಹಾರವನ್ನು ಹೆಚ್ಚಿಸಲು ಮಾರ್ಗಗಳನ್ನು ಕುರಿತು ಚರ್ಚಿಸಿದ್ದಾರೆ.  10 ರಾಷ್ಟ್ರಗಳ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದ ಭಾರತ-ಆಸಿಯಾನ್ ಸಂವಹನ ಶೃಂಗಸಭೆಯಲ್ಲಿ , 25 ವರ್ಷಗಳ ಇಂಡೋ-ಆಸಿಯಾನ್ ಸಂಬಂಧಗಳನ್ನು ಗುರುತಿಸುವ ಸಲುವಾಗಿ ಮೋದಿ ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. .
ನಿಯಮಾಧಾರಿತ ಸಮಾಜ ಹಾಗೂ ಶಾಂತಿಯ ಕುರಿತಂತೆ ಆಸಿಯಾನ್ ರಾಷ್ಟ್ರಗಳು ಹೊಂದಿರುವ ದೂರದೃಷ್ಟಿಯನ್ನು ಭಾರತ ಗೌರವಿಸಲಿದೆ ಎಂದು ಮೋದಿ ಹೇಳಿದ್ದಾರೆ. ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳ ತೀರದ ಸಮುದ್ರದಲ್ಲಿ  ನೌಕಾಪಡೆಗೆ ನೀಡಲಾಗುವ ಸ್ವಾತಂತ್ರ್ಯವು ಸಮುದ್ರ ಮಾರ್ಗದಲ್ಲಿ ಭಾರತ-ಆಸಿಯಾನ್ ರಾಷ್ಟ್ರಗಳ ಸಹಕಾರ ಯತ ನಡೆಯ ಉದ್ದೇಶ ಹೊಂದಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹಿಮಾಲಯ ವ್ಯಾಪ್ತಿಯಲ್ಲಿ ಚೀನಾ ಸೇನೆ ಹಾಗೂ ಆರ್ಥಿಕ ಪ್ರಾಬಲ್ಯ ದಿನದಿಂಡ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹಾ ವೇಳೆಯಲ್ಲಿ ವ್ಯಾಪಾರ ಮತ್ತು ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿ ಆಸಿಯಾನ್ ರಾಷ್ಟ್ರಗಳ ಪ್ರಬಲ ಮಿತ್ರರಾಷ್ಟ್ರವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳಲು ಭಾರತಕ್ಕೆ ಇದೊಂದು ಉತ್ತಮ ಅವಕಾಶ ಎಂದು ವಿದೇಶಾಂಗ ವ್ಯವಹಾರ ತಜ್ಞರು ಭಾವಿಸುತ್ತಾರೆ
ಭಯೋತ್ಪಾದನೆ, ಭದ್ರತೆ ಮತ್ತು ಸಂಪರ್ಕದಂತಹಾ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಆಸಿಯಾನ್ ಸಹಕಾರಕ್ಕೆ ಈ ಶೃಂಗಸಭೆ ಉತ್ತಮ ವೇದಿಕೆಯಾಗಿದೆ ಎಂದು ಅಧಿಕಾರಿಗಳ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ.
ಆಸಿಯಾನ್ ರಾಷ್ಟ್ರಗಳ ಮುಖಂಡರು ನಾಳೆ ನಡೆಯಲಿರುವ ಗಣರಾಜ್ಯ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.ಇದೊಂದು "ಐತಿಹಾಸಿಕ ಮತ್ತು ಅಭೂತಪೂರ್ವ ಕ್ಷಣ" ಎಂದು ಪ್ರಧಾನಿ ಮೋದಿ ಕರೆದಿದ್ದಾರೆ. ಇದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಸಿಯಾನ್ ರಾಷ್ಟ್ರಗಳ ಗಣ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com