'ಆಜಾದ್ ಕಾಶ್ಮೀರ' ಘರ್ಷಣೆ: ಲಂಡನ್'ನಲ್ಲಿರುವ ಭಾರತೀಯ ದೇಶಪ್ರೇಮಿಗಳಿಗೆ ರಿಜಿಜು ಸೆಲ್ಯೂಟ್

ಆಜಾದ್ ಕಾಶ್ಮೀರ ಕುರಿತಂತೆ ಲಂಡನ್ ನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದೇಶಪ್ರೇಮಿಗಳಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಶನಿವಾರ ಸೆಲ್ಯೂಟ್ ಹೊಡೆದಿದ್ದಾರೆ...
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು
ನವದೆಹಲಿ: ಆಜಾದ್ ಕಾಶ್ಮೀರ ಕುರಿತಂತೆ ಲಂಡನ್ ನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದೇಶಪ್ರೇಮಿಗಳಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಶನಿವಾರ ಸೆಲ್ಯೂಟ್ ಹೊಡೆದಿದ್ದಾರೆ. 
69ನೇ ಗಣರಾಜ್ಯೋತ್ಸವ ದಿನದಂದು ಕಾಶ್ಮೀರ ಮತ್ತು ಖಲೀಸ್ತಾನದ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಬ್ರಿಟಿಷ್ ಹೌಸ್ ಆಫ್ ಲಾರ್ಡ್'ನ ಸದಸ್ಯ ನಾಜೀರ್ ಅಹ್ಮದ್ ಅವರು ಕರಾಳ ದಿನಕ್ಕೆ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಲಂಡನ್ ಭಾರತೀಯ ರಾಯಭಾರಿ ಕಚೇರಿ ಬಳಿ ಘರ್ಷಣೆ ಉಂಟಾಗಿತ್ತು. 
ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ನೂರಾರು ಸಂಖ್ಯೆಯಲ್ಲಿ ನಾಜೀರ್ ಬೆಂಬಲಿತ ಜನರು ಭಾರತದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆ ಭಾರತಾಂಬೆಯ ಹೆಮ್ಮೆಯ ಮಕ್ಕಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ಈ ವೇಳೆ ಉಭಯ ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. 
ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಿತಿಕ್ರಿಯೆ ನೀಡಿರುವ ಕಿರಣ್ ರಿಜಿಜು ಅವರು, ಲಂಡನ್ ನಲ್ಲಿರುವ ಭಾರತೀಯ ದೇಶಪ್ರೇಮಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದೇನೆ. ತೀವ್ರಗಾಮಿಗಳ ಚಟುವಟಿಕೆಗಳು ಭಾರತ ಶಕ್ತಿಯನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ದಿಂದ ರಣ್ ಆಫ್ ಕಚ್, ಕನ್ಯಾಕುಮಾರಿಯಿಂದ ಪಂಜಾಬ್'ವರೆಗೂ ನಾವೆಲ್ಲರೂ ಒಂದೇ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com