ಕಾರ್ಮಿಕರ ಕನಿಷ್ಟ ವೇತನವನ್ನು ಕೇಂದ್ರ ಸರ್ಕಾರ ಶೇಕಡಾ 40ರಷ್ಟು ಏರಿಕೆ ಮಾಡಿದ್ದು, ಕಾರ್ಮಿಕ ಕಾನೂನನ್ನು ಅನುಷ್ಠಾನಕ್ಕೆ ತರಲಾಗಿದ್ದು ಶ್ರಮ ಸುವಿಧ ಪೋರ್ಟಲ್ ಎಂಬ ಆನ್ ಲೈನ್ ಸೇವೆಯನ್ನು ಸರ್ಕಾರ ಆರಂಭಿಸಿದೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಸ್ವಂತಿಕೆಯನ್ನು ಬೆಳೆಸಲು ಸರ್ಕಾರ 2,400 ಅಟಲ್ ಟಿಂಕರಿಂಗ್ ಲ್ಯಾಬ್ಸ್ ಎಂಬ ಯೋಜನೆಯನ್ನು ಅಟಲ್ ಇನ್ನೊವೇಶನ್ ಮಿಷನ್ ನಡಿ ತಂದಿದೆ. ದೀನದಯಾಳ್ ಅಮೃತ ಯೋಜನೆಯಡಿ ಜೀವ ಉಳಿಕೆಯ ಔಷಧಗಳು ಮತ್ತು ಆಪರೇಷನ್ ಸಾಧನಗಳನ್ನು 111 ಕೇಂದ್ರಗಳಲ್ಲಿ ಶೇಕಡಾ 60ರಿಂದ 90ರಷ್ಟು ಕಡಿತ ದರದಲ್ಲಿ ನೀಡಲಾಗುತ್ತಿದೆ. ಇದರಿಂದ ಬಡವರಿಗೆ ಅನುಕೂಲವಾಗುತ್ತಿದೆ ಎಂದರು.