ಜನವರಿ 29ರಂದು ಈ ಘಟನೆ ನಡೆದಿದೆ. ನಿನ್ನೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಮಹಿಳೆಯನ್ನು ಅಡ್ಮಿಟ್ ಮಾಡಿಕೊಳ್ಳಲು ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದಾರೆ. ಇದರಿಂದ ಮಹಿಳೆ ಆಸ್ಪತ್ರೆಯಿಂದ ಹೊರಗಡೆ ಬರುತ್ತಿದ್ದಂತೆ ಹೆರಿಗೆ ನೋವು ಜಾಸ್ತಿಯಾಗಿ ಆಸ್ಪತ್ರೆಯ ಮುಂಭಾಗದಲ್ಲೇ ಮಗುವಿನ ಜನ್ಮ ನೀಡಿದಳು ಎಂದು ಆಕೆಯ ಪತಿ ಆರೋಪಿಸಿದ್ದು, ಈ ಆರೋಪವನ್ನು ವೈದ್ಯಕೀಯ ಅಧೀಕ್ಷಕರು ತಳ್ಳಿಹಾಕಿದ್ದಾರೆ.