ಭಾರತ ನಿರಾಶ್ರಿತರ ರಾಜಧಾನಿ ಆಗುವುದು ಬೇಡ: ಸುಪ್ರೀಂಗೆ ಕೇಂದ್ರ ಪ್ರತಿಕ್ರಿಯೆ

ಭಾರತವು ನಿರಾಶ್ರಿತರ ರಾಜಧಾನಿ ಆಗುವುದು ಬೇಡ ಎಂದು ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಕಳಕಳಿ ವ್ಯಕ್ತಪಡಿಸಿದೆ...
ರೋಹಿಂಗ್ಯ
ರೋಹಿಂಗ್ಯ
ನವದೆಹಲಿ: ಭಾರತವು ನಿರಾಶ್ರಿತರ ರಾಜಧಾನಿ ಆಗುವುದು ಬೇಡ ಎಂದು ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಕಳಕಳಿ ವ್ಯಕ್ತಪಡಿಸಿದೆ. 
ನೆರ ರಾಷ್ಟ್ರಗಳ ಜನರು ನಮ್ಮ ದೇಶಕ್ಕೆ ನುಗ್ಗುತ್ತಾರೆ. ಭಾರತವು ನಿರಾಶ್ರಿತರ ರಾಜಧಾನಿ ಆಗುವುದು ಬೇಡ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ. 
ಗಡಿಯಲ್ಲಿ ಭದ್ರತಾ ಪಡೆಯ ಯೋಧರು ನೆರ ರಾಷ್ಟ್ರದವರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಮ್ಯಾನ್ಮಾರ್ ನಲ್ಲಿ ಕಿರುಕುಳದಿಂದ ತಪ್ಪಿಸಿಕೊಂಡವರು ಗಡಿಯಲ್ಲಿ ಮೆಣಸಿನ ಸ್ಪ್ರೇ ಹಾಗೂ ಸ್ಟನ್ ಗ್ರೆನೇಡ್ ದಾಳಿಯ ತೊಂದರೆಗೆ ಒಳಗಾಗಿರುವುದಾಗಿ ರೋಹಿಂಗ್ಯಾ ನಿರಾಶ್ರಿತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. 
ರೋಹಿಂಗ್ಯಾ ನಿರಾಶ್ರಿತರು ಭಾರತದ ನಿರಾಶ್ರಿತರ ಶಿಬಿರಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಶಾಲೆ ಅಥವಾ ಆಸ್ಪತ್ರೆಯಿಂದ ಈ ಜನರು ದೂರು ಉಳಿದಿದ್ದು ಪರಿಸ್ಥಿತಿ ಅಮಾನವೀಯವಾಗಿದೆ ಎಂದು ಅಡ್ವೋಕೇಟ್ ಪ್ರಶಾಂತ್ ಭೂಷಣ್ ನಿರಾಶ್ರಿತರ ಪರ ವಾದ ಮಂಡಿಸಿದರು. 
ರೋಹಿಂಗ್ಯಾ ನಿರಾಶ್ರಿತರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಲು ಸಮಯ ನೀಡುವಂತೆ ತುಷಾರ್ ಮೆಹ್ತಾ ಸಮಯಾವಕಾಶ ಕೋರಿದ್ದು ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ನಿಗದಿಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com