ಬಿಜೆಪಿ ಶಾಸಕರ ಬೇಡಿಕೆಗೆ ಮುಸ್ಲಿಂ ಸಮುದಾಯದ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಮಸೀದಿ ಮುಂಭಾಗದಲ್ಲಿ ಲಕ್ಷ್ಮಣನ ವಿಗ್ರಹ ಸ್ಥಾಪಿಸಿದರೆ ನಮ್ಮ ಪ್ರಾರ್ಥನೆಗೆ ಅಡ್ಡಿ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಈ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೆಲೆ ವಾಲಿ ಮಸೀದಿಯ ಮುಸ್ಲಿಂ ಧರ್ಮಗುರು ಫಝಲ್-ಎ-ಮನ್ನಾನ್ "ಇಸ್ಲಾಂ ನಲ್ಲಿ ವಿಗ್ರಹದ ಎದುರು ಪ್ರಾರ್ಥನೆ ಸಲ್ಲಿಸುವುದಕ್ಕೆ ಸಾಧ್ಯವಿಲ್ಲ, ಈ ಬಗ್ಗೆ ನಾವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಯೋಗಿ ಆದಿತ್ಯನಾಥ್ ಅವರ ಗಮನಕ್ಕೂ ಈ ವಿಷಯವನ್ನು ತರುತ್ತೇವೆ ಎಂದು ಹೇಳಿದ್ದಾರೆ.