ನವದೆಹಲಿ: ದ್ವೇಷದ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ನಲ್ಲಿ ದ್ವೇಷ ಸಾಧನೆಯ ಅಪರಾಧಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಮಂಗಳವಾರ ಪ್ರಶ್ನಿಸಿದ್ದಾರೆ.
ಮೋದಿ ಆಡಳಿತದಲ್ಲಿ ಪ್ರತಿ ತಿಂಗಳು ಸುಮಾರು 28 ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಕಳೆದ 70 ವರ್ಷಗಳಲ್ಲೇ ಇದು ಅತಿ ಹೆಚ್ಚು ಎಂದು ಕಪಿಲ್ ಸಿಬಲ್ ಅವರು ಹೇಳಿದ್ದಾರೆ.
ದ್ವೇಷದ ವಾತಾವರಣ ಸೃಷ್ಟಿಸುವ ಮೂಲಕ ಅಮಾಯಕರ ಹತ್ಯೆ ನಡೆಯುತ್ತಿದೆ. ಇದು ನಾಯಕತ್ವ ಮೌನವಹಿಸಿರುವುದರ ಫಲಿತಾಂಶ. 2014ರಿಂದ ಮನ್ ಕಿ ಬಾತ್ ನಲ್ಲಿ ದ್ವೇಷ ಸಾಧನೆಯ ಅಪರಾಧಗಳನ್ನು ಏಕೆ ಪ್ರಸ್ತಾಪಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಟ್ವೀಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಅಭಿಶೇಕ್ ಮನು ಸಿಂಗ್ವಿ ಸಹ ಸಿಬಲ್ ಪ್ರಶ್ನೆಯನ್ನು ಬೆಂಬಲಿಸಿದ್ದು, ಮೋದಿ ಸರ್ಕಾರ ದೇಶಾದ್ಯಂತ ಹತ್ಯೆಗೆ ಸಹಾಯ ಮತ್ತು ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.