ಮಧ್ಯಪ್ರದೇಶ: ನೂಡಲ್ಸ್ ಸೇವಿಸಿದ 8 ಮಂದಿ ಅಸ್ವಸ್ಥ

ನೂಡಲ್ಸ್ ಸೇವಿಸಿ 8 ಮಂದಿ ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಚತ್ತಾರ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶ: ನೂಡಲ್ಸ್ ಸೇವಿಸಿದ 8 ಮಂದಿ ಅಸ್ವಸ್ಥ
ಮಧ್ಯಪ್ರದೇಶ: ನೂಡಲ್ಸ್ ಸೇವಿಸಿದ 8 ಮಂದಿ ಅಸ್ವಸ್ಥ
ಭೋಪಾಲ್: ನೂಡಲ್ಸ್ ಸೇವಿಸಿ 8 ಮಂದಿ ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಚತ್ತಾರ್ಪುರ್ ಜಿಲ್ಲೆಯಲ್ಲಿ ನಡೆದಿದೆ. 
ಏಳು ಮಂದಿ ಮಕ್ಕಳು, ಓರ್ವ ವೃದ್ಧರು ಸೇರಿದಂತೆ ಒಟ್ಟು 8 ಜನರು ನೂಡಲ್ಸ್ ಸೇವಿಸಿ ಅಸ್ವಸ್ಥಗೊಂಡಿದ್ದು, ಸಾಗರ್ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 
ಸ್ಥಳೀಯ ಅಂಗಡಿಯಿಂದ ನೂಡಲ್ಸ್ ಪ್ಯಾಕ್ ನ್ನು ತರಲಾಗಿತ್ತು, ಮಕ್ಕಳು ನೂಡಲ್ಸ್ ಸೇವಿಸಿದ ತಕ್ಷಣ ವಾಂತಿ ಪ್ರಾರಂಭವಾಯಿತು. ಮಕ್ಕಳೊಂದಿಗೆ ನೂಡಲ್ಸ್ ಸೇವಿಸಿದ್ದ ವೃದ್ಧೆಗೂ ಸಹ ಆರೋಗ್ಯ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 
ಅಸ್ವಸ್ಥಗೊಂಡ ಮಕ್ಕಳು ಹಾಗೂ ವೃದ್ಧೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ 4 ಮಕ್ಕಳ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಗ್ರಾಮದಿಂದ 70 ಕಿಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಸಾಗರ್ ನಲ್ಲಿರುವ ಬುಂದೇಲ್ಖಂಡ್ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಯಿತು ಎಂದು ಮಕ್ಕಳ ತಂದೆ ಬರೇಲಾಲ್ ಅಹಿರ್ವಾರ್ ಹೇಳಿದ್ದಾರೆ. 
ಫುಡ್ ಪಾಯ್ಸನ್ ನಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯರು ಹೇಳಿದ್ದಾರೆ. ನೂಡಲ್ಸ್ ನಲ್ಲಿ ಸಮಸ್ಯೆ ಇತ್ತೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ನೌಗಾಂವ್ ನ ತಹಶಿಲ್ದಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com