ಹತ್ಯೆಯಾದ ಗ್ಯಾಂಗ್'ಸ್ಟರ್ ಭಜರಂಗಿ, ಸುನಿಲ್ ರಥಿ ನಡುವೆ ವೈಷಮ್ಯವಿತ್ತು; ಜೈಲರ್
ದೇಶ
ಹತ್ಯೆಯಾದ ಗ್ಯಾಂಗ್'ಸ್ಟರ್ ಭಜರಂಗಿ, ಸುನಿಲ್ ರಥಿ ನಡುವೆ ವೈಷಮ್ಯವಿತ್ತು; ಜೈಲರ್
ಹತ್ಯೆಯಾದ ಗ್ಯಾಂಗ್ ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಭಜರಂಗಿ ಹಾಗೂ ಸುನಿಲ್ ರಥಿ ನಡುವೆ ವೈಷಮ್ಯಗಳಿದ್ದವು ಎಂದು ಜೈಲಿನ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ...
ಲಖನೌ: ಹತ್ಯೆಯಾದ ಗ್ಯಾಂಗ್ ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಭಜರಂಗಿ ಹಾಗೂ ಸುನಿಲ್ ರಥಿ ನಡುವೆ ವೈಷಮ್ಯಗಳಿದ್ದವು ಎಂದು ಜೈಲಿನ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಮುನ್ನಾ ಭಜರಂಗಿ ಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೈಲರ್, ಸುನಿಲ್ ಹಾಗೂ ಭಜರಂಗಿ ನಡುವೆ ವೈಷಮ್ಯಗಳಿದ್ದವು. ಈ ಹಿನ್ನಲೆಯಲ್ಲಿ ಸುನಿಲ್ ರಥಿ, ಭಜರಂಗಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ವಾರ್ಡನ್ ಹಾಗೂ ಮುಖ್ಯ ವಾರ್ಡನ್ ಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಕಳೆದ ರಾತ್ರಿಯಷ್ಟೇ ಭಜರಂಗಿಯನ್ನು ಝಾನ್ಸಿಯಿಂದ ಬಾಘ್'ಪತ್ ಜೈಲಿಗೆ ಕರೆತರಲಾಗಿತ್ತು. ಇಂದು ಬೆಳಿಗ್ಗೆ ಸಹ ಕೈದಿ ಭಜರಂಗಿಯನ್ನು ಗುಂಡಿಟ್ಟು ಹತ್ಯೆ ಮಾಡಿ, ಪಿಸ್ತೂಲ್'ನ್ನು ಬಚ್ಚಿಟ್ಟಿದ್ದ. ಮುನ್ನಾ ಭಜರಂಗಿ ಜೀವಕ್ಕೆ ಅಪಾಯವಿದೆ ಎಂದು ಕೆಲಸ ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿತ್ತು ಎಂದು ಗ್ಯಾಂಗ್'ಸ್ಟರ್ ಪರ ವಕೀಲ ವಿ. ಶ್ರೀವಾತ್ಸವ ಅವರು ಹೇಳಿದ್ದಾರೆ.


