ಚೆನ್ನೈ: ಕಳೆದ ವರ್ಷ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ 23 ವರ್ಷದ ಟೆಕ್ಕಿಯ ಗಲ್ಲು ಶಿಕ್ಷೆಯನ್ನು ಮಂಗಳವಾರ ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.
ಕಳೆದ ವರ್ಷ ಫೆಬ್ರವರಿ 19ರಂದು ವಿಚಾರಣಾ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆ ಪ್ರಶ್ನಿಸಿ ಆರೋಪಿ ಟೆಕ್ಕಿ ಎಸ್ ದಶವಂತ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಮೂರ್ತಿಗಳಾದ ಎಸ್ ವಿಮಲಾ ಮತ್ತು ರಾಮಾತಿಲಿಂಗಮ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.
ಚೆನ್ನೈನಲ್ಲಿ ವಾಸವಿದ್ದ ಸಾಫ್ಟವೇರ್ ಇಂಜಿನಿಯರ್ ದಶವಂತ್ ತನ್ನದೇ ಅಪಾರ್ಟ್ಮೆಂಟ್ ನಲ್ಲಿದ್ದ ಹಾಸಿನಿ ಎಂಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಯಾರಿಗೂ ತಿಳಿಯಬಾರದೆಂದು ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದ.
ಮೊದಲು ಏನೂ ತಿಳಿಯದಂತೆ ನಟಿಸಿದ್ದ ಆರೋಪಿಯನ್ನು ಬಾಲಕಿಯ ಶವ ದೊರೆತ ನಂತರ ಬಂಧಿಸಲಾಗಿತ್ತು.