ಮೋದಿ ಸರ್ಕಾರ ಅಂಬಾನಿ ಜೇಬಿನಲ್ಲಿದೆ: ಜಿಯೋ ಇನ್ ಸ್ಟಿಟ್ಯೂಟ್ ಬಗ್ಗೆ ಕೇಜ್ರಿವಾಲ್

ರಿಲಯನ್ಸ್ ಪ್ರತಿಷ್ಠಾನದ ಜಿಯೋ ಇನ್ ಸ್ಟಿಟ್ಯೂಟ್ ಗೆ ಉತ್ಕೃಷ್ಟ ಸಂಸ್ಥೆ ಸ್ಥಾನಮಾನ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: ರಿಲಯನ್ಸ್ ಪ್ರತಿಷ್ಠಾನದ ಜಿಯೋ ಇನ್ ಸ್ಟಿಟ್ಯೂಟ್ ಗೆ ಉತ್ಕೃಷ್ಟ ಸಂಸ್ಥೆ ಸ್ಥಾನಮಾನ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು, ಬಿಜೆಪಿ ಸರ್ಕಾರ ಅಂಬಾನಿ ಜೇಬಿನಲ್ಲಿದೆ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಂಬಾನಿ ಜೇಬಿನಲ್ಲಿತ್ತು. ಈಗ ಮೋದಿ ಸರ್ಕಾರ ಅಂಬಾನಿ ಜೇಬಿನಲ್ಲಿದೆ. ಏನಾದರೂ ಬದಲಾಗಿದೆಯೇ? ಎಂದು ಕೇಜ್ರಿವಾಲ್ ಅವರು ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ ಅವರ ಟ್ವೀಟ್ ಗೆ ಪ್ರತಿ ಟ್ವೀಟ್ ಮಾಡಿದ್ದಾರೆ.
ಇದಕ್ಕು ಮುನ್ನ ಯಶವಂತ್ ಸಿನ್ಹಾ ಅವರು, ಜಿಯೋ ಇನ್ ಸ್ಟಿಟ್ಯೂಟ್ ಇನ್ನೂ ಸ್ಥಾಪನೆಯೇ ಆಗಿಲ್ಲ. ಅಸ್ತಿತ್ವದಲ್ಲೇ ಇಲ್ಲ. ಆದರೂ ಅದಕ್ಕೆ ಸರ್ಕಾರ ಉತ್ಕೃಷ್ಟ ಸ್ಥಾನಮಾನ ನೀಡಿರುವುದು ಎಂ ಅಂಬಾನಿಯ ಮಹತ್ವ ಏನು ಅಂತ ಗೊತ್ತಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.
ನಿನ್ನೆಯಷ್ಟೆ ಕೇಂದ್ರ ಸರ್ಕಾರ ಜಿಯೋ ಇನ್ಸ್ ಸ್ಟಿಟ್ಯೂಟ್ ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳಿಗೆ ಉತ್ಕೃಷ್ಟ ಸ್ಥಾನಮಾನ ನೀಡಿತ್ತು. ಈ ಸ್ಥಾನಮಾನ ಪಡೆದ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರುಪಾಯಿ ಅನುದಾನ ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com