ಪ್ರವಾಹದ ಮುನ್ನೆಚ್ಚರಿಕೆ : ದೇಶಾದ್ಯಂತ 71 ಕಡೆಗಳಲ್ಲಿ 100 ಎನ್ ಡಿಆರ್ ಎಫ್ ತಂಡ ನಿಯೋಜನೆ

ಭಾರೀ ಮಳೆ ಹಾಗೂ ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ 71 ಕಡೆಗಳಲ್ಲಿ ಸುಮಾರು 100 ತಂಡಗಳಲ್ಲಿ 4 ಸಾವಿರದ 500 ಸಿಬ್ಬಂದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿಯೋಜಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರೀ ಮಳೆ ಹಾಗೂ ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ  ದೇಶಾದ್ಯಂತ 71 ಕಡೆಗಳಲ್ಲಿ  ಸುಮಾರು 100 ತಂಡಗಳಲ್ಲಿ  4 ಸಾವಿರದ 500 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯನ್ನು  ನಿಯೋಜಿಸಲಾಗಿದೆ.
ಎಲ್ಲಾ ಎನ್ ಡಿಆರ್ ಎಫ್ ತುಕಡಿಗಳೊಂದಿಗೆ ಹೆಚ್ಚುವರಿ ತಂಡಗಳಿದ್ದು, ಅವುಗಳನ್ನು ಬೇಡಿಕೆಗೆ ತಕ್ಕಂತೆ ಬಳಸಿಕೊಳ್ಳಲಾಗುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಪ್ರವಾಹ ಪೀಡಿತ ಜನರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 14 ರಾಜ್ಯಗಳ  74 ಕಡೆಗಳಲ್ಲಿ  97 ಎನ್ ಡಿಆರ್ ಎಫ್  ತಂಡಗಳನ್ನು ನಿಯೋಜಿಸಲಾಗಿದೆ ಎಂದು  ಗೃಹ ಸಚಿವಾಲಯ ತಿಳಿಸಿದೆ.
ಎನ್ ಡಿಆರ್ ಎಫ್ ಪಡೆ ಭಾರತೀಯ ಹವಾಮಾನ ಇಲಾಖೆ ಹಾಗೂ ಕೇಂದ್ರ ನೀರು ಆಯೋಗ ಮತ್ತಿತರ ಏಜೆನ್ಸಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿವೆ. ಬೆಟಲಿಯನ್ ಕಮಾಂಡರ್  ರಾಜ್ಯಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ  ಉಂಟಾದಾಗ ಅಗತ್ಯ ನೆರವು ಪಡೆಯಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com