ಸೂಪರ್ ಮ್ಯಾನ್ ಎಂದು ಹೇಳಿಕೊಳ್ಳುತ್ತೀರಿ, ಆದರೆ ನೀವು ಏನನ್ನೂ ಮಾಡಿಲ್ಲ: ದೆಹಲಿ ಲೆ.ಗವರ್ನರ್ ಕಾಲೆಳೆದ ಸುಪ್ರೀಂ

ದೆಹಲಿಯ ಕಸದ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಲೆಫ್ಚಿನೆಂಟ್ ಗವರ್ನರ್ ಅನಿಲ್ ಬೈಜೆಲ್ ಅವರಿಗೆ...
ಅನಿಲ್ ಬೈಜಲ್
ಅನಿಲ್ ಬೈಜಲ್
ನವದೆಹಲಿ: ದೆಹಲಿಯ ಕಸದ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ  ಲೆಫ್ಚಿನೆಂಟ್ ಗವರ್ನರ್ ಅನಿಲ್ ಬೈಜೆಲ್ ಅವರಿಗೆ ಸುಪ್ರೀಂಕೋರ್ಟ್ ತಪರಾಕಿ ಹಾಕಿದೆ.
ನನಗೆ ಅಧಿಕಾರವಿದೆ, ನಾನು ಸೂಪರ್ ಮ್ಯಾನ್ ಎಂದು ನೀವು ಹೇಳಿಕೊಳ್ಳುತ್ತೀರಿ, ಆದರೆ ನೀವು ಏನನ್ನೂ ಮಾಡಿಲ್ಲ ಎಂದು ನ್ಯಾಯಾಲಯ ಗಮನಿಸಿದೆ, ಮುನಿಸಿಪಲ್ ಕಾರ್ಪೋರೇಷನ್ ಮೇಲೆ ಲೆಫ್ಟಿನೆಂಟ್ ಗವರ್ನರ್ ಗೆ ಅಧಿಕಾರವಿದೆ, ಆದರೂ ಕಸದ ಸಮಸ್ಯೆ ಬಗೆಹರಿಸಲು ಯಾವುದೇ ತಕ್ಕ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದೆ.
ದೇಶಾದ್ಯಂತ ಇರುವ ಘನತ್ಯಾಜ್ಯ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಗಮನಿಸುತ್ತಿದ್ದು, ಕಸದ ರಾಶಿಗೆ  ಕೇಂದ್ರ ಸರ್ಕಾರವನ್ನು ಬೈಯ್ಯಬೇಕೋ ಅಥವಾ ದೆಹಲಿ ಸರ್ಕಾರವನ್ನು ಹೊಣೆಯಾಗಿಸಬೇಕೋ ಎಂದು ಕಟುಕಿದೆ.
ಇನ್ನೂ ದೆಹಲಿ ಸಿಎಂ ಪರ ಮಾತನಾಡಿದ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ನೀವು  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಎಳೆದು ತರಲು ಸಾಧ್ಯವಿಲ್ಲ, ಕಸದ ಸಮಸ್ಯೆ ಬಗೆಹರಿಸಲು ಲೆ. ಗವರ್ನರ್ ಗೆ ಅವಕಾಶವಿದೆ ಎಂದು ತಿಳಿಸಿದೆ. ಕಸದ ಸಮಸ್ಯೆಯಿಂದ ದೆಹಲಿ ಸಮಾಧಿಯಾಗಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com