ಎನ್ ಡಿಎ ಸೇರಿ ಆಂಧ್ರ ಮುಖ್ಯಮಂತ್ರಿಯಾಗಿ: ಜಗನ್ ಮೋಹನ್ ರೆಡ್ಡಿಗೆ ಆಫರ್

ಎನ್ ಡಿಎ ಸೇರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ರಾಮ್ ದಾಸ್ ಅಠಾವಳೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್
ಎನ್ ಡಿಎ ಸೇರಿ ಆಂಧ್ರ ಮುಖ್ಯಮಂತ್ರಿಯಾಗಿ: ಜಗನ್ ಮೋಹನ್ ರೆಡ್ಡಿಗೆ ಆಫರ್
ಎನ್ ಡಿಎ ಸೇರಿ ಆಂಧ್ರ ಮುಖ್ಯಮಂತ್ರಿಯಾಗಿ: ಜಗನ್ ಮೋಹನ್ ರೆಡ್ಡಿಗೆ ಆಫರ್
ಹೈದರಾಬಾದ್: ಎನ್ ಡಿಎ ಸೇರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ರಾಮ್ ದಾಸ್ ಅಠಾವಳೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿಗೆ ಆಫರ್ ನೀಡಿದ್ದಾರೆ. 
ವೈಎಸ್ ಆರ್ ಕಾಂಗ್ರೆಸ್ ಎನ್ ಡಿಎ ಸೇರಿದರೆ ಜಗನ್ ಮೋಹನ್ ರೆಡ್ಡಿ 2019 ರ ವಿಧಾನಸಭೆ ಚುನಾವಣೆ ನಂತರ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಬಹುದು, ಅಷ್ಟೇ ಅಲ್ಲದೇ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆಯೂ ಎನ್ ಡಿ ಎ ಚಿಂತನೆ ನಡೆಸುತ್ತದೆ ಎಂದು ಅಠಾವಳೆ ಹೇಳಿದ್ದಾರೆ. 
ನನ್ನ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ವೈಎಸ್ ಆರ್ ಸಿಪಿ ಒಟ್ಟಿಗೆ ಚುನಾವಣೆ ಎದುರಿಸಿದರೆ ಬಿಜೆಪಿ ಹಾಗೂ ಆರ್ ಪಿಐ ಪಕ್ಷಗಳು ಸೇರಿ ಜಗನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತವೆ ಎಂದು ರಾಮ್ ದಾಸ್ ಅಠಾವಳೆ ಹೇಳಿದ್ದಾರೆ. 
ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಿದ್ದ ಚಂದ್ರಬಾಬು ನಾಯ್ಡು ವೈಎಸ್ ಆರ್ ಕಾಂಗ್ರೆಸ್ ಎನ್ ಡಿಎ ಮೈತ್ರಿಕೂಟ ಸೇರಲಿದ್ದಾರೆ ಎಂಬ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ರಾಮ್ ದಾಸ್ ಅಠಾವಳೆ ಹೇಳಿಕೆ ಮಹತ್ವ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com