ರೈತರ ಹೆಸರಿನಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರಿಗೆ ಬೆಂಬಲ ಬೆಲೆ ಹೆಚ್ಚಿಸುವ ಕುರಿತಂತೆ ಚರ್ಚೆ ನಡೆಸಲು ಸಮಯವಿಲ್ಲ. ಈ ಕುರಿತ ಕಡತಗಳನ್ನೂ ಮುಂದಕ್ಕೆ ಸಾಗಲೂ ಬಿಡುತ್ತಿಲ್ಲ. ರೈತರ ಕುರಿತಂತೆ ಇದೀಗ ಮೊಸಳೆ ಕಣ್ಣೀರು ಹಾಕುತ್ತಿರುವವರು, ತಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರದಾದ್ಯಂತ ಪೂರ್ಣಗೊಳ್ಳದೆ ನೆಲಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳತ್ತ ಏಕೆ ಗಮನ ಹರಿಸಲಿಲ್ಲ?
ಈ ಹಿಂದೆ ಇದ್ದ ಸರ್ಕಾರ ಕೂಡ ಅಪೂರ್ಣ ಯೋಜನೆಗಳನ್ನು ಕೈಗೆತ್ತಿಕೊಂಡು, ಅವುಗಳು ಯಶಸ್ವಿಯಾಗದಂತೆ ಮಾಡಿತ್ತು. ಪ್ರಸ್ತುತ ದೇಶದಲ್ಲಿರುವ ಪರಿಸ್ಥಿತಿಗಳಿಗೆಲ್ಲಾ ನಾವೇ ಕಾರಣ. ಈ ಯೋಜನೆಗಳು ಕಾಲಕ್ಕೆ ಸರಿಯಾಗಿ ಪೂರ್ಣಗೊಂಡಿದ್ದರೆ, ಜನರು ನಿಮಗೆ ಲಾಭವಾಗುವಂತೆ ಮಾಡುತ್ತಿದ್ದರು. ಬಿಜೆಪಿ-ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೂರ್ವಾಂಚಲ್ ನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರ ಫಲಿತಾಂಶವನ್ನು ಎಲ್ಲರೂ ನೋಡುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.