ಶತ್ರುವಿನಿಂದಲೇ ಉಳಿಯಿತು 18 ಜನರ ಜೀವ, ಗುಜರಾತ್‍ನಲ್ಲೊಂದು ವಿಚಿತ್ರ ಘಟನೆ!

ನೀಲ್ ಗಾಯ್(ನೀಲಿ ಜಿಂಕೆ)ಗಳೆಂದರೆ ಗುಜರಾತ್ ರೈತರ ಪಾಲಿಗೆ ಶತ್ರುಗಳಿದ್ದಂತೆ. ನೀಲ್ ಗಾಯ್ ಗಳು ತಂಡೋಪತಂಡವಾಗಿ ಬಂದು ಬೆಳೆದು ನಿಂತ...
ನೀಲ್ ಗಾಯ್
ನೀಲ್ ಗಾಯ್
ಅಹಮದಾಬಾದ್: ನೀಲ್ ಗಾಯ್(ನೀಲಿ ಜಿಂಕೆ)ಗಳೆಂದರೆ ಗುಜರಾತ್ ರೈತರ ಪಾಲಿಗೆ ಶತ್ರುಗಳಿದ್ದಂತೆ. ನೀಲ್ ಗಾಯ್ ಗಳು ತಂಡೋಪತಂಡವಾಗಿ ಬಂದು ಬೆಳೆದು ನಿಂತ ಪೈರುಗಳನ್ನು ತಿಂದು ಹಾಕುತ್ತಿದ್ದವು ಇದು ರೈತರ ಚಿಂತೆಗೆ ಕಾರಣವಾಗಿತ್ತು.
ಇಂತಹ ನೀಲ್ ಗಾಯ್ ಗಳು ಸುಮಾರು 18 ಜನರ ಜೀವ ಉಳಿಯಲು ಕಾರಣವಾಗಿವೆ. ಹೌದು ಪ್ರವಾಹಕ್ಕೆ ಸಿಲುಕಬೇಕಿದ್ದ 18 ಜನರು ನೀಲ್ ಗಾಯ್ ಗಳ ಸೂಚನೆಯಿಂದ ಬದುಕುಳಿದಿದ್ದಾರೆ. 
ಮೂವರು ಅರಣ್ಯಾಧಿಕಾರಿಗಳು, ಮೂವರು ಕಾವಲುಗಾರರು ಹಾಗೂ 12 ಜನ ಕಾರ್ಮಿಕರು ಹಂಡಾ ವಿದಿ ಹುಲ್ಲುಗಾವಲಿನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 3 ಗಂಟೆ ವೇಳೆ ಅಲ್ಲೇ ಪಕ್ಕದಲ್ಲಿ ಮೇಯುತ್ತಿದ್ದ ನೀಲ್ ಗಾಯ್ ಗಳು ವಿಚಿತ್ರವಾಗಿ ವರ್ತಿಸಿವೆ. ಅಲ್ಲದೆ ಅವುಗಳು ಅಲ್ಲಿಂದ ಕಾಲು ಕಿತ್ತಿವೆ. ಇದನ್ನು ಕಂಡು ಗಲಿಬಿಲಿಗೊಂಡ 18 ಮಂದಿ ಇದು ಅಪಾಯ ಮುನ್ಸೂಚನೆ ಎಂದು ಭಾವಿಸಿ ಕೆಲಸವನ್ನು ಸುರಕ್ಷಿತ ಜಾಗಕ್ಕೆ ತೆರಳಿದ್ದಾರೆ. 
ನಂತರ ಸುಮಾರು 3 ಗಂಟೆಯಲ್ಲೇ ನದಿಗೆ ಪ್ರವಾಹ ಬಂದು ಹುಲ್ಲುಗಾವಲಿನಲ್ಲಿ 6 ರಿಂದ 7 ಅಡಿ ನೀರು ತುಂಬಿತು. ಅಂತು ನೀಲ್ ಗಾಯ್ ಗಳ ವಿಚಿತ್ರ ವರ್ತನೆ 18 ಜನರ ಜೀವ ಉಳಿಯಲು ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com