ಸರ್ಜಿಕಲ್ ದಾಳಿ ಸಾಕ್ಷಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಹೇಳಬೇಕಿತ್ತೇ?: ಪರಿಕ್ಕರ್

ಭಾರತೀಯ ಸೇನೆಯ ಸರ್ಜಿಕಲ್ ದಾಳಿಯ ನೈಜತೆಯನ್ನೇ ಪ್ರಶ್ನಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಸರ್ಜಿಕಲ್ ದಾಳಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಸೇನೆಗೆ ಹೇಳಬೇಕಿತ್ತೇ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಣಜಿ: ಭಾರತೀಯ ಸೇನೆಯ ಸರ್ಜಿಕಲ್ ದಾಳಿಯ ನೈಜತೆಯನ್ನೇ ಪ್ರಶ್ನಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಸರ್ಜಿಕಲ್ ದಾಳಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಸೇನೆಗೆ ಹೇಳಬೇಕಿತ್ತೇ ಎಂದು ಹೇಳಿದ್ದಾರೆ.
2016ರಲ್ಲಿ ನಡೆದಿದ್ದ ಭಾರತೀಯ ಸೇನೆಯ ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆ ಇನ್ನೂ ರಾಜಕೀಯ ಪಕ್ಷಗಳ ವಾದ-ಪ್ರತಿವಾದಗಳು ನಡೆಯುತ್ತಿದ್ದು, ಇತ್ತೀಚೆಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ರಾಹುಲ್ ಗಾಂದಿ ಸರ್ಜಿಕಲ್ ದಾಳಿ ಸತ್ಯತೆ ಅಥವಾ ನೈಜತೆಯನ್ನು ಪ್ರಶ್ನಿಸಿದ್ದರು. ಇದಕ್ಕೆ ಈಗ ತಿರುಗೇಟು ನೀಡಿರುವ ಮಾಜಿ ರಕ್ಷಣಾ ಸಚಿವ ಹಾಗೂ ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಸರ್ಜಿಕಲ್ ದಾಳಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಸೇನೆಗೆ ಹೇಳಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.
'ಸರ್ಜಿಕಲ್ ದಾಳಿ ನಡೆದಾಗ ಕಾಂಗ್ರೆಸ್ ಪಕ್ಷವನ್ನು ಅಥವಾ ರಾಹುಲ್ ಗಾಂಧಿ ಅವರನ್ನು ಸರ್ಜಿಕಲ್ ದಾಳಿಗೆ ಕರೆದುಕೊಂಡು ಹೋಗಿ ಎಂದು ಸೇನೆಗೆ ಹೇಳಬೇಕಿತ್ತೇ..?.. ಸರ್ಜಿಕಲ್ ದಾಳಿ ಸಾಧ್ಯವೇ ಇಲ್ಲ ಎಂಬಂತಹ ಮನಃಸ್ಥಿತಿಯಲ್ಲಿತ್ತು ಎಂದು ಪರಿಕ್ಕರ್ ಹೇಳಿದ್ದಾರೆ. 
ಅಂತೆಯೇ ಸರ್ಜಿಕಲ್ ದಾಳಿಯಂತಹ ಸೂಕ್ಷ್ಮ ಕಾರ್ಯಾಚರಣೆಗಳನ್ನು ನಡೆಸುವಾಗ ಗೌಪ್ಯತೆ ಕಾಪಾಡುವುದು ಮೊದಲ ಆದ್ಯತೆಯಾಗಿರುತ್ತದೆ. ಸರ್ಜಿಕಲ್ ದಾಳಿಯ ಕುರಿತು ಕೇವಲ ಅತ್ಯುನ್ನತ ಶ್ರೇಣಿಯ ಕೇವಲ 4 ಮ್ಯಕ್ತಿಗಳಿಗೆ ಮಾತ್ರ ತಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವನಾಗಿದ್ದ ನನಗೆ, ಸೇನಾ ಮುಖ್ಯಸ್ಥರಿಗೆ ಮತ್ತು ಸೇನಾ ಕಾರ್ಯಾಚರಣೆಗಳ ನಿರ್ದೇಶಕರಿಗೆ ಮತ್ತು ಸೇನೆಯ ಸ್ಥಳೀಯ ಉನ್ನತ ಅಧಿಕಾರಿಗೆ ಮಾತ್ರ ತಿಳಿದಿತ್ತು ಎಂದು ಪರಿಕ್ಕರ್ ಮಾಹಿತಿ ನೀಡಿದ್ದಾರೆ.
ಇನ್ನು 2016ರಲ್ಲಿ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೇನೆ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರರು 18 ಮಂದಿ ಸೈನಿಕರನ್ನು ಕೊಂದು ಹಾಕಿದ್ದರು. ಇದರ ಬೆನ್ನಲ್ಲೇ 2016ರ ಸೆಪ್ಟೆಂಬರ್ 29ರ ರಾತ್ರಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಗ್ಗಿಲ್ಲದೇ ಕಾರ್ಯಾಚರಣೆ ನಡೆಸುತ್ತಿದ್ದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ಸುಮಾರು 60ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com