ಭೀಕರ ಅಪಘಾತ: ಉತ್ತರಾಖಂಡದಲ್ಲಿ ಕಣಿವೆಗೆ ಉರುಳಿದ ಬಸ್, 10 ಸಾವು!

ಪ್ರಯಾಣಿಕರ ಬಸ್ ವೊಂದು ಕಣಿವೆಗೆ ಉರುಳಿದ ಪರಿಣಾಮ ಅದರೊಳಗಿದ್ದ ಸುಮಾರು 10 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಕಂದಕಕ್ಕೆ ಉರುಳಿದ ಬಸ್
ಕಂದಕಕ್ಕೆ ಉರುಳಿದ ಬಸ್
Updated on: 
ಡೆಹ್ರಾಡೂನ್: ಪ್ರಯಾಣಿಕರ ಬಸ್ ವೊಂದು ಕಣಿವೆಗೆ ಉರುಳಿದ ಪರಿಣಾಮ ಅದರೊಳಗಿದ್ದ ಸುಮಾರು 10 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರಾಖಂಡದ ರಿಷಿಕೇಶ್ ಗಂಗೋತ್ರಿ ಹೆದ್ದಾರಿಯ ಸೂರ್ಯಾಧರ್ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸುಮಾರು 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಉತ್ತರಾಖಂಡ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ. ಪರಿಣಾಮ ಸುಮಾರು 10 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 9 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬಸ್ ಸುಮಾರು 250 ಮೀಟಗ್ ಅಧಿಕ ಆಳವಿರುವ ಕಂದಕಕ್ಕೆ ಉರುಳಿದ್ದು, ಬಸ್ ಮೇಲೆತ್ತಲು ಹರಸಾಹಸ ಪಡಲಾಗುತ್ತಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com