2019 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸೇರಲ್ಲ- ಚಂದ್ರಬಾಬು ನಾಯ್ಡು
ಅಮರಾವತಿ : 2019 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದೊಂದಿಗೆ ಸೇರುವುದಿಲ್ಲ ಎಂದು ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ . ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಂದ್ರಬಾಬು ನಾಯ್ಡು ,ಬಹುಮತ , ನೈತಿಕತೆ ನಡುವಿನ ಹೋರಾಟದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಕೇಂದ್ರಸರ್ಕಾರದ ವಿರುದ್ಧ ನಿನ್ನೆ ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು ಎಂದು ಚಂದ್ರಬಾಬು ನಾಯ್ಜು ಹೇಳಿದ್ದಾರೆ.
ನಮಗೆ ಅಧಿಕಾರದ ಆಸೆ ಇಲ್ಲ. ಸಂಪುಟದಲ್ಲಿಯೂ ಸ್ಥಾನ ಹೊಂದಲು ನಾವೂ ಬಯಸುವುದಿಲ್ಲ. ರಾಜ್ಯದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ 2014 ರಲ್ಲಿ ಎನ್ ಡಿಎ ಮೈತ್ರಿಕೂಟವನ್ನು ಟಿಡಿಪಿ ಸೇರಿಕೊಂಡಿತ್ತು ಎಂದು ಅವರು ಸ್ಪಷ್ಪಪಡಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ಬಿಜೆಪಿ ಸರ್ಕಾರದಿಂದ ನ್ಯಾಯ ಒದಗಿಸುಲ ನಾಲ್ಕು ವರ್ಷ ಕಾಯ್ದೇವು, ಆದರೆ, ಅವರು ರಾಜ್ಯದ ಜನರಿಗೆ ದ್ರೋಹ ಬಗೆದರು. ಮತ್ತೆ ಇದನ್ನು ಮಾಡಲ್ಲ ಅನ್ನೋದು ಹೇಗೆ ನಂಬಲು ಸಾಧ್ಯ ಎಂದು ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳ ತೃತೀಯ ರಂಗದ ಕಡೆಗೆ ಟಿಡಿಪಿ ಒಲವು ಹೊಂದಿದ್ದು, ಕೇಂದ್ರಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ ಚಂದ್ರಬಾಬುನಾಯ್ಡು ,ತಾನೂ ಪ್ರಧಾನಿ ಮಂತ್ರಿ ಸ್ಥಾನದ ಅಕಾಂಕ್ಷಿಯಲ್ಲಿ ಎಂದು ಪುನರ್ ಉಚ್ಚರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ