
ಆಂಧ್ರಪ್ರದೇಶ: ದೇಶದ ದೈತ್ಯ ಸಾಪ್ಟ್ ವೇರ್ ಕಂಪನಿಗಳಲ್ಲಿ ಒಂದಾದ ಹೆಚ್ ಸಿಎಲ್ ಮುಖ್ಯಸ್ಥ ಶಿವನಾಡರ್ ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ 1 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.
ನಿನ್ನೆ ಸಂಜೆ ದೇವಾಲಯಕ್ಕೆ ಆಗಮಿಸಿದ ಶಿವನಾಡರ್ ಪೂಜೆ ಸಲ್ಲಿಸಿದ ಬಳಿಕ , 1 ಕೋಟಿ ರೂಪಾಯಿಯ ಡಿಡಿಯನ್ನು ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ. ರವಿ ಹೇಳಿದ್ದಾರೆ.
ತಿರುಪತಿಯಲ್ಲಿರುವ ದಿವ್ಯಾಂಗರ ಟ್ರಸ್ಟ್ ಹಾಗೂ ಆಸ್ಪತ್ರೆಗಳಿಗೆ ದೇಣಿಗೆ ಹಣ ಬಳಸಿಕೊಳ್ಳುವಂತೆ ಶಿವನಾಡರ್ ತಿಳಿಸಿದ್ದಾರೆ ಎಂದು ಟಿ. ರವಿ ತಿಳಿಸಿದ್ದಾರೆ.
Advertisement