ನೀಗಿದ 30 ವರ್ಷಗಳ ಫಿರಂಗಿ ಬರ: ಸೆಪ್ಟೆಂಬರ್ ನಲ್ಲಿ ಸೇನೆ ಬತ್ತಳಿಕೆ ಸೇರಲಿದೆ ಎಂ777 ಹೊವಿಟ್ಜರ್!

ವಿವಾದ ಹಗರಣಗಳಿಗೆ ಕಾರಣವಾಗಿದ್ದ ಬೋಫೋರ್ಸ್ ಫಿರಂಗಿಗಳ ಯುಗಾಂತ್ಯ ಸನಿಹವಾಗಿದ್ದು, ಭಾರತೀಯ ಸೇನೆಯ 30 ವರ್ಷಗಳ ಫಿರಂದಿ ಬರ ಇದೇ ಸೆಪ್ಟೆಂಬರ್ ನಲ್ಲಿ ನೀಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿವಾದ ಹಗರಣಗಳಿಗೆ ಕಾರಣವಾಗಿದ್ದ ಬೋಫೋರ್ಸ್ ಫಿರಂಗಿಗಳ ಯುಗಾಂತ್ಯ ಸನಿಹವಾಗಿದ್ದು, ಭಾರತೀಯ ಸೇನೆಯ 30 ವರ್ಷಗಳ ಫಿರಂದಿ ಬರ ಇದೇ ಸೆಪ್ಟೆಂಬರ್ ನಲ್ಲಿ ನೀಗಲಿದೆ.
ಹೌದು.. ಈ ಹಿಂದೆ ಅಮೆರಿಕದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅನ್ವಯ ಅಮೆರಿಕ ಸೇನೆಯ ಪ್ರಮುಖ ಅಸ್ತ್ರ ವಿನಾಶಕಾರಿ ಎಂ 777 ಹೊವಿಟ್ಜರ್ ಫಿರಂಗಗಳು ಇದೇ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ. ಈ ಹಿಂದೆ ಭಾರತ ಮತ್ತು ಅಮೆರಿಕ ದೇಶಗಳು ಒಪ್ಪಂದ ಮಾಡಿಕೊಂಡಿದ್ದು, ಬಿಎಇ ಸಿಸ್ಟಮ್ಸ್ ಸಂಸ್ಥೆಯೊಂದಿಗೆ 145 ಫಿರಂಗಿಗಳ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. 145ರಲ್ಲಿ 25 ತೋಪುಗಳು ಕಂಪನಿಯ ಅಮೆರಿಕ ಘಟಕದಲ್ಲಿ ತಯಾರಾಗಲಿದ್ದು ಇನ್ನುಳಿದ 120 ತೋಪುಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತದಲ್ಲೇ ತಯಾರಾಗಲಿವೆ. 
ಅಮೆರಿಕ ಸೇನೆಯ ಪ್ರಮುಖ ಅಸ್ತ್ರವಾಗಿರುವ ಎಂ777 ಹೊವಿಟ್ಜರ್ ಫಿರಂಗಿ 30 ಕಿ.ಮೀ ದೂರದ ಗುರಿಯನ್ನೂ ಧ್ವಂಸ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.
ಇನ್ನು ಕಳೆದ 30 ವರ್ಷಗಳಲ್ಲಿ ಬೋಫೋರ್ಸ್ ಬಳಿಕ ಅಮೆರಿಕದಿಂದ ಖರೀದಿ ಮಾಡುತ್ತಿರುವ ಮೊದಲ ಫಿರಂಗಿ ಇದಾಗಿದ್ದು, ಬೋಫೋರ್ಸ್ ಫಿರಂಗಿ ಖರೀದಿ ಪ್ರಕ್ರಿಯೆಯಲ್ಲಿ ಕೇಳಿ ಬಂದಿದ್ದ ಲಂಚದ ಆರೋಪಗಳಿಂದಾಗಿ ಫಿರಂಗಿ ಖರೀದಿ ಪ್ರಕ್ರಿಯೆಗೆ ಅಡ್ಡಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com