ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಕುಟುಂಬದ ಸಾಕು ನಾಯಿಯೂ ಸಾವು

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬುರಾರಿ ಕುಟುಂಬದ 11 ಸದಸ್ಯರ ನಿಗೂಢ ಸಾವಿನಿಂದ ಆಘಾತಕ್ಕೊಳಗಾಗಿದ್ದ ಬುರಾರಿ ಕುಟುಂಬದ ಸಾಕು ನಾಯಿ ಕೂಡ ಇದೀಗ ಸಾವನ್ನಪ್ಪಿದೆ...
ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಕುಟುಂಬದ ಸಾಕು ನಾಯಿಯೂ ಸಾವು
ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಕುಟುಂಬದ ಸಾಕು ನಾಯಿಯೂ ಸಾವು
ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬುರಾರಿ ಕುಟುಂಬದ 11 ಸದಸ್ಯರ ನಿಗೂಢ ಸಾವಿನಿಂದ ಆಘಾತಕ್ಕೊಳಗಾಗಿದ್ದ ಬುರಾರಿ ಕುಟುಂಬದ ಸಾಕು ನಾಯಿ ಕೂಡ ಇದೀಗ ಸಾವನ್ನಪ್ಪಿದೆ. 
ಬುರಾರಿ ಕುಟುಂಬದ ಸದಸ್ಯರು ಸಾವನ್ನಪ್ಪಿದ ಬಳಿಕ, ಅನಾಥವಾಗಿದ್ದ 'ಟಾಮಿ' ಹೆಸರಿನ ನಾಯಿಯನ್ನು ಪ್ರಾಣಿ ಆಶ್ರಯದಲ್ಲಿ ಬಿಡುಲಾಗಿತ್ತು. 
ಬುರಾರಿ ಕುಟುಂಬದಿಂದ ತರಲಾಗಿದ್ದ ಶ್ವಾನವು, ಕ್ರಮೇಣವಾಗಿ ತನ್ನ ತೂಕವನ್ನೂ ಹೆಚ್ಚಿಸಿಕೊಂಡಿತ್ತು. ಭಾನುವಾರ ಸಂಜೆ 4 ಗಂಟೆಗೆ ಆಹಾರ ಸೇವಿಸಿದ್ದ ಟಾಮಿ, ವಾಕಿಂಗ್ ಸಹ ಮಾಡಿತ್ತು. ಆದರೆ, ಇದಾದ ಬಳಿಕ ಮರಳಿ ಕರೆ ತರುತ್ತಿದ್ದ ವೇಳೆ ಗೇಟ್ ಬಳಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. 
ಟಾಮಿಯನ್ನು ವೈದ್ಯರು ಪರೀಕ್ಷೆ ನಡೆಸಿದ್ದಾರೆ. ಆದರೂ ಟಾಮಿ ಸಾವನ್ನಪ್ಪಿತ್ತು ಎಂದು ನಾಯಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ನೊಯ್ಡಾ ಮೂಲದ ಪ್ರಾಣಿಗಳ ಹೋರಾಟಗಾರ ಸಂಜಯ್ ಮೋಹಪಾತ್ರ ಹೇಳಿದ್ದಾರೆ. 
ಮೋಕ್ಷ ಪಡೆಯುವ ಸಲುವಾಗಿ ಬುರಾರಿ ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ನಾಯಿಯನ್ನು ಮನೆ ಮೇಲೆ ಕಟ್ಟಿಹಾಕಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com