ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಸುಗಳ ತಂಟೆಗೆ ಹೋಗಬೇಡಿ: ಮುಸ್ಲಿಮರಿಗೆ ಎಸ್ ಪಿ ಮುಖಂಡ ಅಜಂಖಾನ್ ಸಲಹೆ

ದೇಶದಲ್ಲಿ ಗೋ ಸಂರಕ್ಷಣೆ ಹೆಸರಲ್ಲಿ ಅಮಾಯಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಿರುವಂತೆಯೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಹಸುಗಳ ತಂಟೆಗೆ ಹೋಗದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದಾರೆ.
ರಾಮ್ ಪುರ: ದೇಶದಲ್ಲಿ ಗೋ ಸಂರಕ್ಷಣೆ ಹೆಸರಲ್ಲಿ ಅಮಾಯಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಿರುವಂತೆಯೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಹಸುಗಳ ತಂಟೆಗೆ ಹೋಗದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದಾರೆ.
ಉತ್ತರ ಪ್ರದೇಶದ ರಾಮ್ ಪುರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅಜಂ ಖಾನ್, ಮುಸ್ಲಿಮರು ತಮ್ಮ ಮುಂದಿನ ತಲೆಮಾರುಗಳ ಸುರಕ್ಷತೆಗಾಗಿ ಹೈನುಗಾರಿಕೆ ಹಾಗು ಹಸು ಸಾಕಣೆಯಿಂದ ದೂರ ಉಳಿಯಬೇಕು ಎಂದು ಹೇಳಿದ್ದಾರೆ.
'ಹೈನೋದ್ಯಮ ಹಾಗೂ ಗೋವುಗಳ ವ್ಯಾಪಾರದಲ್ಲಿರುವ ಮುಸ್ಲಿಮರು, ತಮ್ಮ ಮುಂದಿನ ತಲೆಮಾರುಗಳ ಸುರಕ್ಷತೆಗಾಗಿ ಅದರಿಂದ ದೂರ ಉಳಿಯಬೇಕೆಂದು ಬೇಡಿಕೊಳ್ಳುತ್ತೇನೆ. ಹಸುವನ್ನು ಮುಟ್ಟಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೆಲ ರಾಜಕಾರಣಿಗಳು ಎಚ್ಚರಿಕೆ ಕೊಡುತ್ತಿರುವ ವೇಳೆ, ಇಂಥಹ ವ್ಯಾಪಾರಗಳಿಂದ ಮುಸ್ಲಿಮರು ದೂರ ಉಳಿಯಬೇಕು. ಇದು ಅವರ ಮುಂದಿನ ತಲೆಮಾರುಗಳಿಗೆ ಒಳ್ಳೆಯದು ಎಂದು ಹೇಳಿದ್ದಾರೆ.
ಇದೇ ಜುಲೈ 20ರ ರಾತ್ರಿ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾನೆ ಎಂದು ಆರೋಪಿಸಿ ರಾಜಸ್ಥಾನದ ಆಳ್ವಾರ್ ನಲ್ಲಿ ರಕ್ಬರ್ ಖಾನ್ ಎಂಬಾತನನ್ನು ಗೋಸಂರಕ್ಷಕರ ಸೋಗಿನಲ್ಲಿದ್ದ ದುಷ್ಕರ್ಮಿಗಳು ಹೊಡೆದು ಕೊಂದು ಹಾಕಿದ್ದರು. ಈ ವಿಚಾರ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ಎಸ್ ಪಿ ಮುಖಂಡ ಅಜಂಖಾನ್ ಅವರ ಹೇಳಿಕೆ ಕುತೂಹಲ ಕೆರಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com