ಗಡಿಯಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಸೇನೆ ಸಿದ್ಧ; ಉತ್ತರ ಕಮಾಂಡ್ ಜಿಒಸಿ ರಣ್ಬೀರ್ ಸಿಂಗ್

ಭಾರತದ ಗಡಿಗಳಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ ಎಂದು ಉತ್ತರ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ರಣ್ಬೀರ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ...
ಉತ್ತರ ಕಮಾಂಡ್ ಜಿಒಸಿ ರಣ್ಬೀರ್ ಸಿಂಗ್
ಉತ್ತರ ಕಮಾಂಡ್ ಜಿಒಸಿ ರಣ್ಬೀರ್ ಸಿಂಗ್
ನವದೆಹಲಿ: ಭಾರತದ ಗಡಿಗಳಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ ಎಂದು ಉತ್ತರ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ರಣ್ಬೀರ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ. 
19ನೇ ಕಾರ್ಗಿಲ್ ವಿಜಯೋತ್ಸವದ ದಿನ ಹಿನ್ನಲೆಯಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿರುವ ಅವರು, ಹಲವು ಸಂದರ್ಭಗಳಲ್ಲಿ ಸೇನಾ ಸೇನೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿರುವ ಕುರಿತು ವರದಿಗಳಾಗಿವೆ. ಆದರೆ, ಇಂತಹ ಉಲ್ಲಂಘನೆಗಳು ನಾವು ವಾಸ್ತವಿಕ ನಿಯಂತ್ರಣ ರೇಖೆ ಮೇಲೆ ವಿವಿಧ ಗ್ರಹಿಕೆಗಳನ್ನು ಹೊಂದಿದ್ದು, ಅಂತಹ ಪ್ರದೇಶಗಳಲ್ಲಿ ಮಾತ್ರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಬಳಿಕ ಪಾಕಿಸ್ತಾನ ಚುನಾವಣೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾರಿಗೆ ಮತ ಹಾಕಬೇಕೆನ್ನುವುದನ್ನು ಪಾಕಿಸ್ತಾನದ ಜನತೆ ನಿರ್ಧರಿಸಬೇಕು. ಆದರೆ, ಗಡಿಯಲ್ಲಿ ಯಾವುದೇ ರೀತಿಯ ಉದ್ಧಟತನ ವರ್ತನೆಗಳು ಪ್ರದರ್ಶಿಸಿದರೂ, ಆ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇನೆಂದು ಪಾಕಿಸ್ತಾನಕ್ಕೆ ಇದೇ ವೇಳೆ ಎಚ್ಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com