ಗೋವಾ: ಶಾಲಾ ಪಠ್ಯಪುಸ್ತಕದಲ್ಲಿ ನೆಹರು ಬದಲು ಸಾವರ್ಕರ್ ಚಿತ್ರ, ಎನ್ ಎಸ್ ಯುಐ ಆಕ್ರೋಶ

ಗೋವಾ ರಾಜ್ಯದ 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ಸ್ವಾತಂತ್ರ ಹೋರಾಟಗಾರ, ಹಿಂದುತ್ವವಾದಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ತೆಗೆದು .....
ಸಾವರ್ಕರ್ ಮತ್ತು ನೆಹರೂ
ಸಾವರ್ಕರ್ ಮತ್ತು ನೆಹರೂ
ಪಣಜಿ: ಗೋವಾ ರಾಜ್ಯದ 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ಸ್ವಾತಂತ್ರ ಹೋರಾಟಗಾರ, ಹಿಂದುತ್ವವಾದಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ತೆಗೆದು ಈ ಮುನ್ನ ಇದ್ದಂತೆ ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಚಿತ್ರ ಹಾಕಬೇಕೆಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ (ಎನ್ ಎಸ್ ಯುಐ)  ಒತ್ತಾಯಿಸಿದೆ.
ಗೋವಾದಲ್ಲಿಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಜನರ ಮನಸಿನಲ್ಲಿ ಬಲಪಂಥೀಯ ಸಿದ್ದಾಂತವನ್ನು ನೆಲೆಗೊಳಿಸಲು ಬಲವಂತದ ಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗ ಎನ್ ಎಸ್ ಯುಐ ಮುಖಂಡರು ಆರೊಪಿಸಿದ್ದಾರೆ.
"ಬಿಜೆಪಿಯು ನಮ್ಮ ಮನಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತವನ್ನು ತುಂಬಲು ಪ್ರಯತ್ನಿಸುತ್ತಿದೆ" .ಎನ್ ಎಸ್ ಯುಐ ಮುಖಂಡ ಅಹ್ರಾಜ್ ಮುಲ್ಲಾ ಹೇಳಿದ್ದಾರೆ.
ಈ ಸಂಬಂಧ ಮನವಿ ಸಲ್ಲಿಕೆಗಾಗಿ  ವಿದ್ಯಾರ್ಥಿಗಳ ಸಂಘವು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಲಿದೆ ಎಂದು ಅವರು ಹೇಳಿದ್ದಾರೆ. "ನಾಳೆ ಅವರು (ಬಿಜೆಪಿ) ಮಹಾತ್ಮಾ ಗಂಧಿ ಅವರ ಚಿತ್ರವನ್ನೂ ತೆಗೆದುಕೊಳ್ಳಬಹುದು. ಮತ್ತು ಕಾಂಗ್ರೆಸ್ ದೇಶಕ್ಕೆ ಏನನ್ನು ಕೊಟ್ಟಿದೆ ಎಂದು ಪ್ರಶ್ನಿಸಬಹುದು. ಇದಕ್ಕಾಗಿ ನಾವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ಅವರೇನಾದರೂ ಆರ್ ಎಸ್ ಎಸ್ ಸಿದ್ದಾಂತ ಅನುಸರಿಐದರೆ ನಾವು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದೇವೆ."
"ಇಂಡಿಯಾ ಅಂಡ್ ದಿ ಕಾಂಟೆಂಪರರಿ ವರ್ಲ್ಡ್ II - ಡೆಮಾಕ್ರಟಿಕ್ ಪಾಲಿಟಿಕ್ಸ್" ಎಂಬ ಶೀರ್ಷಿಕೆಯ ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಈ ಮುನ್ನ ಇದ್ದ ನೆಹರೂ ಚಿತ್ರವನ್ನು ತೆಗೆದು ಆ ಜಾಗಕ್ಕೆ ಸಾವರ್ಕರ್ ಅವರ ಬಣ್ಣದ ಚಿತ್ರವನ್ನು ಅಳವಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com