ಶಬರಿಮಲೆ ವಿವಾದ: ಧಾರ್ಮಿಕ ಆಚರಣೆಗಳಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಬಾರದು- ವಕೀಲ

ಶಬರಿಮಲೆಯಲ್ಲಿ ಹಲವು ಯುಗಗಳಿಂದಲೂ ಧಾರ್ಮಿಕ ಆಚರಣೆಗಳನ್ನು ಪಾಲನೆ ಮಾಡುತ್ತಿದ್ದು, ಧಾರ್ಮಿಕ ಆಚರಣೆಗಳಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡಬಾರದು ಎಂದು ಪಂಡಾಲಂ ರಾಜಮನೆತನ ಕುಟುಂಬದ ಪರ ವಕೀಲ ರಾಧಾಕೃಷ್ಣನ್ ಅವರು ಗುರುವಾರ ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಶಬರಿಮಲೆಯಲ್ಲಿ ಹಲವು ಯುಗಗಳಿಂದಲೂ ಧಾರ್ಮಿಕ ಆಚರಣೆಗಳನ್ನು ಪಾಲನೆ ಮಾಡುತ್ತಿದ್ದು, ಧಾರ್ಮಿಕ ಆಚರಣೆಗಳಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡಬಾರದು ಎಂದು ಪಂಡಾಲಂ ರಾಜಮನೆತನ ಕುಟುಂಬದ ಪರ ವಕೀಲ ರಾಧಾಕೃಷ್ಣನ್ ಅವರು ಗುರುವಾರ ಹೇಳಿದ್ದಾರೆ. 
ಕೇರಳದ ರಾಜ್ಯದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದ ರಾಜಮನೆತನದ ಪರವಾಗಿ ವಾದ ಮಂಡಿಸಿರುವ ವಕೀಲ ರಾಧಾಕೃಷ್ಣನ್ ಅವರು, ಧಾರ್ಮಿಕ ಆಚರಣೆಗಳಲ್ಲಿ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶ ಮಾಡಬಾರದು ಎಂದು ಹೇಳಿದ್ದಾರೆ. 
10-50 ವರ್ಷವರೆಗಿನ ಮಹಿಳೆಯರಿಗೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಅರ್ಜಿದಾರರು ಕೇಳಿದ್ದಾರೆ. ಕೆಲವು ಹಿಂದೂಗಳ ನಂಬಿಕೆಗಳು, ಆಚರಣೆಗಳನ್ನು ಗುರಿ ಮಾಡುತ್ತಿದ್ದಾರೆ. ಶಬರಿಮಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಹಲವು ಯುಗಗಳಿಂದಲೂ ಪಾಲನೆ ಮಾಡಿಕೊಂಡು ಬರಲಾಗುತ್ತಿದ್ದು, ಧಾರ್ಮಿಕ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಬಾರದು ಎಂದು ತಿಳಿಸಿದ್ದಾರೆ. 
ಭಾರತೀಯ ಯುವ ವಕೀಲ ಸಂಘಟನೆ ಸಲ್ಲಿಸಿದ್ದ ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಧಾಕೃಷ್ಣನ್ ಅವರು, ದೇವರೂ ತಪ್ಪಿಸ್ಸಿನಲ್ಲಿದ್ದು, 41 ದಿನಗಳ ಕಾಲ ತಪಸ್ಸನ್ನು ಮಾಡುತ್ತಿರುತ್ತಾರೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com