ಕೇರಳ ವಿದ್ಯಾರ್ಥಿನಿ ಮೀನು ಮಾರಾಟ ಫೋಟೋ ವೈರಲ್, ಟ್ರೋಲ್

ಕಾಲೇಜು ಮುಗಿದ ನಂತರ ಮೀನು ಮಾರಾಟಕ್ಕೆ ತೆರಳುತ್ತಿದ್ದ ಬಿಎಸ್ಸಿ ವಿದ್ಯಾರ್ಥಿ ಫೋಟೋ ಟ್ರೋಲ್ ಗೊಳಗಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಆಲ್ಫೋನ್ಸ್ ಕನ್ನಾಥನಮ್ ..
ವಿದ್ಯಾರ್ಥಿನಿ ಹನನ್
ವಿದ್ಯಾರ್ಥಿನಿ ಹನನ್
ಕೇರಳ: ಕಾಲೇಜು ಮುಗಿದ ನಂತರ ಮೀನು ಮಾರಾಟಕ್ಕೆ ತೆರಳುತ್ತಿದ್ದ ಬಿಎಸ್ಸಿ ವಿದ್ಯಾರ್ಥಿ ಫೋಟೋ  ವೈರಲ್ ಆದ ನಂತರ ಟ್ರೋಲ್ ಗೊಳಗಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಆಲ್ಫೋನ್ಸ್ ಕನ್ನಾಥನಮ್ ವಿದ್ಯಾರ್ಥಿನಿಯ ಬೆಂಬಲಕ್ಕೆ ನಿಂತಿದ್ದಾರೆ.
ತೋಡುಪುಜಾ ಖಾಸಗಿ ಕಾಲೇಜಿನಲ್ಲಿ ಬಿಎಸ್ ಸಿ ವ್ಯಾಸಂಗ ಮಾಡುತ್ತಿರುವ ಹನನ್, ಕಾಲೇಜು ಮುಗಿಸಿ, ಎರ್ನಾಕುಲಂ ನ ತಮ್ಮನಂ ನಲ್ಲಿ ಮೀನು ಮಾರಾಟದಲ್ಲಿ ತೊಡಗಿರುವ ಫೋಟೋವನ್ನು  ಮಲಯಾಳಂ ದಿನಪತ್ರಿಕೆ ಮಾತೃಭೂಮಿಯಲ್ಲಿ  ಪ್ರಕಟಿಸಲಾಗಿತ್ತು.
ಎರಡು ದಿನಗಳ ಹಿಂದೆ ಪ್ರಕಟವಾಗಿದ್ದ ಆಕೆಯ ಕತೆ  ಸೋಷಿಯಲ್ ಮಾಡಿಯಾದಗದಲ್ಲಿ ಬಾರೀ ಪ್ರಚಾರ ಪಡೆದಿತ್ತು. ಸಿನಿಮಾ ಕಲಾವಿದರು, ರಾಜಕಾರಣಿಗಳು ಸೇರಿದಂತೆ ಹಲವು ಮಂದಿ ಶೇರ್ ಮಾಡಿದ್ದರು. ಆದರೆ ಕೆಲವರು ಹನನ್ ಕತೆಯ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದರು.  ಅದು ನಕಲಿ ಸುದ್ದಿ ಎಂದು ಹೇಳಿ ಟ್ರೋಲ್ ಮಾಡಿದ್ದರು.
ಈ ವೇಳೆ ಹನನ್ ಕಾಲೇಜು ಪ್ರಾಂಶು ಪಾಲರು ಮತ್ತು ನೆರೆಹೊರೆಯವರು ಆಕೆಯ ಬೆಂಬಲಕ್ಕೆ ನಿಂತರು.  ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಸುಳ್ಳು ಸುದ್ದಿಯಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಮಂತ್ರಿ ಕನ್ನಾಥನಮ್, ಕೇರಳ ಶಾರ್ಕ್ ಗಳು ಹನನ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು, ನಾನು ತಲೆ ತಗ್ಗಿಸುವಂತಾಗಿದೆ, ಛಿದ್ರಗೊಂಡ ಬದುಕನ್ನು ಆ ಹುಡುಗಿ ಕಟ್ಟಿಕೊಳ್ಳಲು ಯತ್ನಿಸುತ್ತಿದೆ. ನೀವು ರಣಹದ್ದುಗಳು ಎಂದು ಬರೆದಿದ್ದಾರೆ.
ಜೀವನದಲ್ಲಿ ಮುಂದೆ ಬರುಲು ವಿದ್ಯಾರ್ಥಿನಿ ಕಷ್ಟಪಡುತ್ತಿದ್ದಾಳೆ, ಈ ಹಿಂದೆ ಪ್ರಧಾನಿಯಾಗುವ ಮೊದಲು ಮೋದಿ ಕೂಡ ತಮ್ಮ ಹಲವು ಕಷ್ಟಗಳನ್ನು ಅನುಭವಿಸಿದ್ದಾರೆ, ಎಲ್ಲಾ ಕಷ್ಟಗಳನ್ನು ದಾಟಿ  ಪ್ರಧಾನಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಟ್ರೋಲ್ ಗೊಳಗಾದ ಹನನ್ ತನ್ನನ್ನು ಒಂಟಿಯಾಗಿ ಬಿಡುವಂತೆ ಎಲ್ಲರಲ್ಲೂ ಕೈಮುಗಿದು ಬೇಡಿಕೊಂಡಿದ್ದಾಳೆ.  ನನಗೆ ಯಾರ ಸಹಾಯವೂ ಬೇಡ, ನನ್ನ ಪಾಡಿಗೆ ನನ್ನನ್ನು ಒಂಟಿಯಾಗಿ ಬಿಟ್ಟರೇ ಸಾಕು, ಯಾವುದೇ ಕೆಲಸ ನನಗೆ ಬೇಡ, ನನ್ನ ದಿನ ನಿತ್ಯದ ಆಹಾರ ನಾನೇ ಸಂಪಾದಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.
ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಎಂಸಿ ಜೋಶ್ಪೇನ್ ಕೊಚ್ಚಿಯಲ್ಲಿ ಹನನ್ ಭೇಟಿಯಾಗುವುದಾಗಿ ತಿಳಿಸಿದ್ದಾರೆ,. ಜೊತೆಗೆ ಕಷ್ಟ ಪಟ್ಟು ಕೆಲಸ ಮಾಡುವ ಮಹಿಳೆಯರ ವಿರುದ್ಧ ಮಾತನಾಡುವುದನ್ನು ಖಂಡಿಸುವುದಾಗಿ ಹೇಳಿದ್ದಾರೆ. 
ಹನನ್ ಸ್ಟೋರಿ ಕೇಳಿರುವ ನಿರ್ಮಾಪಕ ಅರುಣ್ ಗೊಪಿ, ಮೋಹನ್ ಲಾಲ್ ಪುತ್ರ  ಪ್ರಣವ್ ನಟಿಸುತ್ತಿರುವ ಸಿನಿಮಾದಲ್ಲಿ ನಟಿಸಲು ಆಫರ್ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com