ನವದೆಹಲಿ: ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಎಂ. ಕರುಣಾನಿಧಿ ಅವರಿಗೆ ಇಂದು 95ನೇ ಜನುಮ ದಿನ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರದ ನಾನಾ ಗಣ್ಯರು, ಅಭಿಮಾನಿಗಳು ಅವರಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಡಿಎಂಕೆ ಅಧಿನಾಯಕ ಕರುಣಾನಿಧಿಯವರಿಗೆ ದೀರ್ಘ, ಆರೋಗ್ಯಕರ ಜೀವನ ದೊರೆಯಲೆಂದು ಹಾರೈಸಿದ್ದಾರೆ. ಅವರು ತಮ್ಮ ಟ್ವಿಟ್ಟರ್ ನಲ್ಲಿ ಕರುಣಾನಿಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
Best wishes to Kalaignar M.Karunanidhi Ji on his birthday. A prolific writer, poet, thinker and orator, Karunanidhi Ji is one of India’s senior most political leaders. May he be blessed with a long and healthy life. @kalaignar89pic.twitter.com/BnZJUA4kjJ
"ಕಲೈನಾರ್ ಎಂ.ಕರುಣಾನಿಧಿ ಅವರಿಗೆ ಜನ್ಮದಿನದ ಶುಭಾಶಯಗಳು. ಬರಹಗಾರ, ಕವಿ, ಚಿಂತಕ ಮತ್ತು ಭಾಷಣಕಾರ, ಕರುಣಾನಿಧಿ ಭಾರತದ ಹಿರಿಯ ರಾಜಕೀಯ ಮುಖಂಡರಲ್ಲಿ ಒಬ್ಬರಾಗಿದ್ದಾರೆ.ಅವರು ಸುದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲಿ ಎಂದು ಆಶಿಸುತ್ತೇನೆ." ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಡಿಎಂಕೆ ಮುಖ್ಯಸ್ಥರಿಗೆ ಹುಟ್ಟು ಹಬ್ಬದಂದು ಶುಭ ಕೋರಿದ್ದು "ಕರುಣಾನಿಧಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು, ನಾನು ನಿಮ್ಮ ಒಳ್ಳೆಯ ಆರೋಗ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ."ಎಂದು ಅವರು ಟ್ವೀಟ್ ಮಾಡಿದ್ದಾರೆ.
Warmest birthday greetings to M Karunanidhi @kalaignar89 Ji. I pray for your good health and happiness