ಮುಂಬೈ: ಕೋಟಿ ಮೊತ್ತದ ಫ್ಲಾಟ್ ಮಾರಾಟಕ್ಕೆ ನಕಾರ, ಪತಿಯ ಕೊಲೆಗೆ ಸುಪಾರಿ ನೀಡಿದ ಮಹಿಳೆ!

15 ಕೋಟಿ ರೂ. ಫ್ಲಾಟ್ ಮಾರಾಟಕ್ಕೆ ಪತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಸುಪಾರಿ ಕೊಟ್ಟು ತನ್ನ ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಆಶಾ ಹಾಗೂ ಅವಳ ಪತಿ ಶಂಕರ್ ಗಾಯಕ್ವಾಡ್
ಆಶಾ ಹಾಗೂ ಅವಳ ಪತಿ ಶಂಕರ್ ಗಾಯಕ್ವಾಡ್
ಮುಂಬೈ: 15 ಕೋಟಿ ರೂ. ಫ್ಲಾಟ್ ಮಾರಾಟಕ್ಕೆ ಪತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಸುಪಾರಿ ಕೊಟ್ಟು ತನ್ನ ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈನ ಕಲ್ಯಾಣ್ ನಗರದಲ್ಲಿ  ನಡೆದ  ಘಟನೆ ಸಂಬಂಧ  ಆರೋಪಿ ಅಶಾ ಗಾಯಕ್ವಾಡ್ (40 ಅವರನ್ನು ಪೋಲೀಸರು ಬಂಧಿಸಿದ್ದಾರೆ. ಆಶಾ ತನ್ನ ಪತಿ  ಶಂಕರ್ ಗಾಯಕ್ವಾಡ್ (44)  ಹತ್ಯೆಗೆ ಸುಪಾರಿ ನೀಡಿದ್ದಳು.
ಶಂಕರ್ ಹೆಸರಿನಲ್ಲಿದ್ದ ಫ್ಲಾಟ್ ಒಂದನ್ನು ಮಾರಾಟ ಮಾಡಲು ನಿರ್ಧರಿಸಿದ್ದ ಆಶಾ ಪತಿಯನ್ನು ಕೇಳಲು ಆತ ಅದಕ್ಕೆ ನಿರಾಕರಿಸಿದ್ದ. ಆದರೆ 15 ಕೋಟಿ ರೂ.  ಬೆಲೆಯ ಫ್ಲಾಟ್ ನ್ನು ಮಾರಬೇಕೆಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದ ಆಶಾ ತನ್ನ ಪತಿ ಶಂಕರ್ ಹತ್ಯೆಗಾಗಿ 30 ಲಕ್ಷ ರೂ. ಗಳಿಗೆ ಸುಪಾರಿ ನೀಡಿದ್ದಲ್ಲದೆ ಹಂತಕರಿಗೆ 4 ಲಕ್ಷ ರೂ ಮುಂಗಡ ಪಾವತಿಸಿದ್ದಳೆಂದು ಪೋಲೀಸರು ಹೇಳಿದ್ದಾರೆ.
ಪ್ರಕರಣದ ವಿವರ
ಮುಂಬೈ ಕಲ್ಯಾಣ್ ನಗರದಲ್ಲಿ ವಾಸವಾಗಿದ್ದ  ಶಂಕರ್ ಕೆಲ ದಿನಗಳ ಹಿಂದೆ ತೀರ್ಥಕ್ಷೇತ್ರಗಳಿಗೆ ಹೋಗುವುದಾಗಿ ಹೇಳಿ ಹೋದವನು ಹಿಂತಿರುಗಿರಲಿಲ್ಲ. ಮೇ 18ರಿಂದ ನಾಪತ್ತೆಯಾಗಿದ್ದ ಶಂಕರ್ ಪತ್ತೆಗಾಗಿ ಮೇ 21ಕ್ಕೆ ಆಶಾ ಹಾಗೂ ಕುಟುಂಬ ಪೋಲೀಸರಿಗೆ ದೂರಿತ್ತಿದ್ದರು. ಇದೇ ವೇಳೆ ಶಂಕರ್ ಸೋದರನಿಗೆ ಅತ್ತಿಗೆ ವರ್ತನೆ ಬಗ್ಗೆ ಅನುಮಾನ ಪ್ರಾರಂಭವಾಗಿತ್ತು. ಪತಿ ಕಾಣೆಯಾಗಿದ್ದರೂ ಸಹ ಆಶಾ ಜೀವನ ಶೈಲಿಯಲ್ಲಿ ಯಾವ ಬದಲಾವಣೆ ಕಾಣದೆ ಇದ್ದದ್ದು ಅವನ ಅನುಮಾನಕ್ಕೆ ಎಡೆಯಾಗಿತ್ತು. ಆತ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರಿತ್ತಿದ್ದಾನೆ.
ಹೆಚ್ಚಿದ ಒತ್ತಡದ ಕಾರಣ ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಆಶಾಳ ಮೊಬೈಲ್ ಕರೆ ಪರಿಶೀಲನೆ ನಡೆಸಿದಾಗ ಆಕೆ ಹಂತಕರೊಡನೆ, ತನ್ನ ಸ್ನೇಹಿತರೊಡನೆ ಪತಿ ಶಂಕರ್ ಹತ್ಯೆ ಸಂಚಿನ ಕುರಿತು ಮಾತನಾಡಿರುವುದು ಪತ್ತೆಯಾಗಿದೆ. ಮತ್ತೆ ಆಶಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಾನು ಎಸಗಿದ್ದ ಕುಕೃತ್ಯದ ಕುರಿತಂತೆ ವಿವರಿಸಿದ್ದಾಳೆ.
ಮೇ 18ರಂದು ಪತಿ ಶಂಕರ್ ಗೆ ನೀಡಿದ್ದ ಊಟದಲ್ಲಿ ಮತ್ತಿನ ಔಷಧಿ ಬೆರೆಸಿ ಕೊಟ್ಟಿದ್ದ ಆಶಾ ಸುಪಾರಿ ಹಂತಕರಿಗೆ ಕರೆ ಮಾಡಿದ್ದಾಳೆ. ಅದರಂತೆ ಹಂತಕರು ಆಗಮಿಸಿ ಶಂಕರ್ ನನ್ನು ಗೋಣಿಚೀಲದಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವನ ಮೇಲೆ ರಾಡ್, ಮಚ್ಚುಗಳಿಂದ ಹಲ್ಲೆ ನಡೆಸಿಸಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ವ್ಬಳಿಕ ದೇಹವನ್ನು ಕಾಲುವೆಗೆ ಎಸೆಯಲಾಗಿದೆ.
ಸಧ್ಯ ಪೋಲೀಸರು ಶಂಕರ್ ಶವದ ಭಾಗಗಳನ್ನು ಪತ್ತೆ ಮಾಡಿದ್ದು ಮರಣೋತ್ತರ ಪರೀಕ್ಷೆ ನಡೆಸಿಸ್ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com