ಟ್ರಕ್‌ಗೆ ಮಿನಿ ಬಸ್ ಡಿಕ್ಕಿ: 10 ಮಂದಿ ದುರ್ಮರಣ

ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಸೊಗ್ರಾಸ್ ಫಾಟಾ ಬಳಿ ಮಿನಿ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ದಾರುಣ ಸಾವನ್ನಪ್ಪಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಾಸಿಕ್: ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಸೊಗ್ರಾಸ್ ಫಾಟಾ ಬಳಿ ಮಿನಿ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ದಾರುಣ ಸಾವನ್ನಪ್ಪಿದ್ದಾರೆ. 
ನಾಸಿಕ್ ನಿಂದ 75 ಕಿಮೀ ದೂರದಲ್ಲಿನ ಚಾಂದ್ವಾಡ್ ಬಳಿ ಬೆಳಗ್ಗೆ 5.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಇದರಲ್ಲಿ ಸ್ಥಳದಲ್ಲೇ 10 ಸಾವನ್ನಪ್ಪಿದ್ದು 12 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಮಧ್ಯಪ್ರದೇಶದ ಉಜ್ಜೈನಿಯಿಂದ ತೀರ್ಥಯಾತ್ರೆ ಮುಗಿಸಿ ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com